ಕರ್ನಾಟಕ

karnataka

ETV Bharat / state

ಹರಿಹರ ತಾಲೂಕಿನ ಅಭಿವೃದ್ದಿಯೇ ನನ್ನ ಗುರಿ: ಶಾಸಕ ಎಸ್. ರಾಮಪ್ಪ

454 ಲಕ್ಷ ವೆಚ್ಚದಲ್ಲಿ ವಿವಿಧ ವಾರ್ಡ್‌ಗಳಲ್ಲಿ ಹಮ್ಮಿಕೊಂಡಿದ್ದ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಶಾಸಕ ಎಸ್. ರಾಮಪ್ಪ
MLA S Ramappa

By

Published : Dec 13, 2019, 12:35 AM IST

ಹರಿಹರ : ನಗರದ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.

ನಗರದ ಕೆ.ಆರ್‌ನಗರ, ವಿಜಯನಗರ, ಕೇಶವನಗರ, ಹರಪನಹಳ್ಳಿ ರಸ್ತೆ, ಗುತ್ತೂರು ಕಾಲೋನಿಗಳಲ್ಲಿ ನಗರಸಭೆಯ 2019-20ನೇ ಸಾಲಿನ 14ನೇ ಹಣಕಾಸು ಆಯೋಗದ ಜನರಲ್ ಬೇಸಿಕ್ ಗ್ರ್ಯಾಂಟ್ ಅನುದಾನದ ಕ್ರಿಯಾ ಯೋಜನೆಯ ಒಟ್ಟು 454 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಸ್. ರಾಮಪ್ಪ

ಬಳಿಕ ಮಾತನಾಡಿದ ಅವರು, ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ನೀಡುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದ್ದು, ಆದ್ಯತೆ ಮೇರೆಗೆ ಹಂತ ಹಂತವಾಗಿ ಅಭಿವೃದ್ಧಿ ಕೆಸಲವನ್ನು ಮಾಡುತ್ತಿದ್ದೇನೆ. ಹರ್ಲಾಪುರದ ಹರಪನಹಳ್ಳಿ ರಸ್ತೆ ವಿಭಜಕಕ್ಕೆ 16 ಲಕ್ಷ ವೆಚ್ಚದಲ್ಲಿ ಅಕ್ಟೋಗನಲ್ ವಿದ್ಯುತ್ ದೀಪದ ಅಳವಡಿಸಿ ಸಾರ್ವಜನಿಕರಿಗೆ ಬೆಳಕಿನ ವ್ಯವಸ್ಥೆ ನೀಡುವುದು. ಗುತ್ತೂರು ಕಾಲೋನಿಯಲ್ಲಿ 40 ಲಕ್ಷ ವೆಚ್ಚದ ಸಿ.ಸಿ.ರಸ್ತೆ, ವಿಜಯನಗರ ಬಡಾವಣೆಯಲ್ಲಿ 11 ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ, ಕೇಶವ ನಗರದಲ್ಲಿ 16 ಲಕ್ಷ ವೆಚ್ಚದ ಉದ್ಯಾನವನ ಅಭಿವೃದ್ಧಿ, ಗಾಂಧಿ ಮೈದಾನದಲ್ಲಿ 04 ಲಕ್ಷ ವೆಚ್ಚದ ಹೈಮಾಸ್ಟ್ ದೀಪ ಅಳವಡಿಕೆ, ವಿದ್ಯಾನಗರದ 60 ಅಡಿ ರಸ್ತೆಯಲ್ಲಿ 6 ಲಕ್ಷ ಮೌಲ್ಯದ ಸಿಸಿ ರಸ್ತೆ ಹಾಗೂ 26 ನೇ ವಾರ್ಡಿನಲ್ಲಿ 7 ಲಕ್ಷ ವೆಚ್ಚದ ಸಿಸಿ ಚರಂಡಿ ಕಾಮಗಾರಿ ಕುರಿತು ಮಾಹಿತಿ ನೀಡಿದರು.

ABOUT THE AUTHOR

...view details