ದಾವಣಗೆರೆ : ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರು ಸಾವಿನ ಹಿನ್ನೆಲೆ, ಶಾಸಕರ ನಿವಾಸಕ್ಕೆ ವಿವಿಧ ಮಠಾಧೀಶರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಚಂದ್ರು ಸಾವಿನ ಪ್ರಕರಣದ ಕುರಿತು ಶಾಸಕ ಎಂಪಿ ರೇಣುಕಾಚಾರ್ಯ ಬಳಿ ಶ್ರೀಗಳ ನಿಯೋಗ ಮಾಹಿತಿ ಪಡೆದು ಶಾಸಕರಿಗೆ ಧೈರ್ಯ ತುಂಬಿದರು.
ಶಾಸಕ ರೇಣುಕಾಚಾರ್ಯ ನಿವಾಸಕ್ಕೆ ಮಠಾಧೀಶರ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ - ಈಟಿವಿ ಭಾರತ ಕನ್ನಡ
ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರು ಸಾವಿನ ಹಿನ್ನೆಲೆ ವಿವಿಧ ಮಠಾಧೀಶರು ಶಾಸಕರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಜಗದ್ಗುರು ಡಾ.ಶ್ರೀ.ಶಾಂತವೀರ ಮಹಾಸ್ವಾಮೀಜಿ (ಪೀಠಾಧ್ಯಕ್ಷರು ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಹೊಸದುರ್ಗ), ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ (ಪೀಠಾಧ್ಯಕ್ಷರು ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿಗುರುಪೀಠ,ಚಿತ್ರದುರ್ಗ), ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮೀಜಿ (ಶ್ರೀ ಮಾದಾರ ಚೆನ್ನಯ್ಯ ಗುರುಪೀಠ,ಚಿತ್ರದುರ್ಗ), ಜಗದ್ಗುರು ಶ್ರೀ ವಚನನಾಂದ ಮಹಾಸ್ವಾಮೀಜಿ (ಪಂಚಮಸಾಲಿ ಪೀಠ, ಹರಿಹರ), ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮೀಜಿ (ಯಾದವ ಮಹಾಸಂಸ್ಥಾನ ಮಠ, ಚಿತ್ರದುರ್ಗ), ಜಗದ್ಗುರು ಶ್ರೀ ಬಸವಮಾಚಿದೇವ ಮಹಾಸ್ವಾಮೀಜಿ (ಪೀಠಾಧ್ಯಕ್ಷರು ಶ್ರೀ ಜಗದ್ಗುರು ಮಾಚಿದೇವ ಮಹಾಸಂಸ್ಥಾನ ಮಠ, ಚಿತ್ರದುರ್ಗ), ಜಗದ್ಗುರು ಶ್ರೀ ಕುಂಬಾರ ಗುಂಡಯ್ಯ ಮಹಾಸ್ವಾಮೀಜಿ (ಕುಂಬಾರ ಗುಂಡಯ್ಯ ಗುರುಪೀಠ, ತೆಲಸಂಗ) ಜಗದ್ಗುರು ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮೀಜಿ (ಹಡಪದ ಗುರುಪೀಠ, ತಂಗಡಗಿ),ಶ್ರೀ ಬಸವಪ್ರಸಾದ ಮಹಾಸ್ವಾಮೀಜಿ, (ಶಿವಶಕ್ಕಿ ಪೀಠ, ಇರಕಲ್) ರೇಣುಕಾಚಾರ್ಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಇದನ್ನೂ ಓದಿ :ಚಂದ್ರು ನಿಗೂಢ ಸಾವು ಪ್ರಕರಣ.. ವಿನಯ್ ಗುರೂಜಿ ಆಶ್ರಮಕ್ಕೆ ಪೊಲೀಸರ ಭೇಟಿ