ಕರ್ನಾಟಕ

karnataka

ETV Bharat / state

ಪಟಾಕಿ ಖರೀದಿಸುವ ದುಡ್ಡಲ್ಲಿ ಪುಸ್ತಕ ಕೊಂಡು ಸ್ನೇಹಿತರಿಗೆ ವಿತರಿಸಿದ ವಿದ್ಯಾರ್ಥಿ

ಹಬ್ಬಕ್ಕೆ ಪಟಾಕಿ ಹೊಡೆದು ಅನಾವಶ್ಯಕವಾಗಿ ಹಣ ಖರ್ಚು ಮಾಡುವುದೇಕೆ ಎಂದುಕೊಂಡು ಇಲ್ಲೊಬ್ಬ ಬಾಲಕ ಬಡ ಮಕ್ಕಳಿಗೆ ಪುಸ್ತಕ ವಿತರಿಸಿದ್ದಾನೆ.

student-distribute-books-instead-of-crackers-in-davanagere
ಸ್ನೇಹಿತರಿಗೆ ಪುಸ್ತಕ ವಿತರಿಸಿದ ವಿದ್ಯಾರ್ಥಿ

By

Published : Nov 5, 2021, 5:18 PM IST

ದಾವಣಗೆರೆ: ಪರಿಸರದ ಮೇಲಿನ ವಿಶೇಷ ಕಾಳಜಿಯಿಂದ ಬಾಲಕನೊಬ್ಬ ಪಟಾಕಿಗೆ ವ್ಯಯಿಸುವ ಹಣದಲ್ಲಿ ಪುಸ್ತಕ ಖರೀದಿಸಿ ಬಡ ಮಕ್ಕಳಿಗೆ ಉಚಿತವಾಗಿ ನೀಡಿದ್ದಾನೆ.


ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದ ಬಾಲಕ ಡಿ.ಆರ್.ಕುಷಾಂತ್ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ದೀಪಾವಳಿ ಹಬ್ಬಕ್ಕೆ ಪಟಾಕಿ ಹೊಡೆದು ಅನಾವಶ್ಯಕ ಹಣ ಖರ್ಚು ಮಾಡುವ ಬದಲು ಬಡ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿ ಈತ ಮಾದರಿಯಾಗಿದ್ದಾನೆ.

'ಪ್ರತೀ ವರ್ಷ ನಮ್ಮ ತಂದೆ ಸುಮಾರು 3 ಸಾವಿರದಿಂದ 4 ಸಾವಿರ ರೂ.ವರೆಗೆ ಪಟಾಕಿ ತಂದುಕೊಡುತ್ತಿದ್ದರು. ಆದರೆ, ಈ ಬಾರಿ ಪಟಾಕಿಗೆ ಖರ್ಚು ಮಾಡುವ ಹಣದಲ್ಲಿ ಪುಸ್ತಕ ತಂದುಕೊಡುವಂತೆ ಕೇಳಿದ್ದೆ. ಈ ಪುಸ್ತಕಗಳನ್ನು ನನ್ನ ಸ್ನೇಹಿತರಿಗೆ ಕೊಟ್ಟಿದ್ದೇನೆ' ಎಂದಿರುವ ಬಾಲಕ, ಪಟಾಕಿ ಹಚ್ಚಬೇಡಿ, ಪರಿಸರ ಉಳಿಸಿ ಎಂಬ ಸಂದೇಶ ನೀಡಿದ್ದಾನೆ.

ಇದನ್ನೂ ಓದಿ:ಬೆಲೆ ಏರಿಕೆ, ಇಳಿಕೆ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್​ಗೆ ಇಲ್ಲ: ಸಿಎಂ ಬೊಮ್ಮಾಯಿ

ABOUT THE AUTHOR

...view details