ದಾವಣಗೆರೆ:ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಅನುಷ್ಠಾನಗೊಳಿಸಲಾಗುವ ಯೋಜನೆಗಳ ಪ್ರಗತಿಯ ವೇಗ, ಅನುದಾನ ಸದ್ಬಳಕೆ ಮತ್ತಿತರೆ ಮಾಹಿತಿಗಳನ್ನು ಆಧರಿಸಿ ನೀಡಲಾಗುವ ಱಂಕಿಂಗ್ ಪ್ರಕಾರ ದೇಶದ 100 ಸ್ಮಾರ್ಟ್ ಸಿಟಿಗಳ ಪೈಕಿ ದಾವಣಗೆರೆ ನಗರವು 8ನೇ ಸ್ಥಾನ ಪಡೆದಿದೆ.
ಸ್ಮಾರ್ಟ್ ಸಿಟಿ ಪಟ್ಟಿ: ದಾವಣಗೆರೆಗೆ ರಾಷ್ಟ್ರ ಮಟ್ಟದಲ್ಲಿ 8ನೇ ಸ್ಥಾನ, ರಾಜ್ಯಕ್ಕೆ ಫಸ್ಟ್ - ದಾವಣಗೆರೆ
ದೇಶದ 100 ಸ್ಮಾರ್ಟ್ ಸಿಟಿಗಳ ಪೈಕಿ ದಾವಣಗೆರೆ ನಗರವು 8ನೇ ಸ್ಥಾನ ಪಡೆದುಕೊಂಡಿದೆ.
Davanagere
ರಾಜ್ಯದ 7 ಸ್ಮಾರ್ಟ್ ಸಿಟಿಗಳ ಪೈಕಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ-2020 ನಗರದ ಸ್ವಚ್ಛತೆಗೆ ಸಂಬಂಧಿಸಿದ್ದಾಗಿದೆ.
ಈ ಪಟ್ಟಿಯಲ್ಲಿ ದಾವಣಗೆರೆ ನಗರ ಪಡೆದ ಱಂಕಿಂಗ್ ಮಹಾನಗರ ಪಾಲಿಕೆ ಆಡಳಿತಕ್ಕೆ ಒಳಪಟ್ಟಿದೆ. ಆದರೂ ಪಾಲಿಕೆಗೂ ಸ್ಮಾರ್ಟ್ ಸಿಟಿ ಱಂಕಿಂಗ್‍ಗೂ ಯಾವುದೇ ಸಂಬಂಧ ಇಲ್ಲವೆಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಸ್ಪಷ್ಟಪಡಿಸಿದ್ದಾರೆ.