ದಾವಣಗೆರೆ: ಬಿಜೆಪಿಯವರಿಗೆ ಮಾನ ಮರ್ಯಾದೆ ಏನೂ ಇಲ್ಲ. ಬಿಜೆಪಿ ತೊಲಗಲೇಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 45 ದಿನಗಳು ಮಾತ್ರ ಚುನಾವಣೆಗೆ ಬಾಕಿ ಇದೆ. ನೀವು ಹೊಸ ಜನಪ್ರತಿನಿಧಿಯನ್ನು ಆಯ್ಕೆ ಮಾಡ್ಬೇಕಾಗಿದೆ ಎಂದು ಕರೆ ನೀಡಿದರು.
ಭ್ರಷ್ಟಾಚಾರ, ದುರಾಡಳಿತವಾದಾಗ ಯಾರೇ ಸಿಎಂ ಆಗಿದ್ರು ರಾಜೀನಾಮೆ ಕೊಡ್ತಿದ್ರು, ಆದ್ರೆ ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಲಿಲ್ಲ. ಶೇ 40 ರಷ್ಟು ಕಮಿಷನ್ ಬಗ್ಗೆ ಬಸವರಾಜ್ ಬೊಮ್ಮಾಯಿ ಹಾಗೂ ಬಿಜೆಪಿ ಮುಖಂಡರು ದಾಖಲೆ ಕೇಳ್ತಾರೆ. ಬಿಜೆಪಿ ಸರ್ಕಾರದಲ್ಲಿ ಕಿರುಕುಳ ತಡೆಯಲಾಗ್ತಿಲ್ಲ, ಶೇ 40ರಷ್ಟು ಕಮಿಷನ್ ಬೇಡಿಕೆ ಇಡುತ್ತಿದ್ದಾರೆಂದು ಗುತ್ತಿಗೆದಾರರ ಸಂಘದವರು ಮೋದಿಗೆ ಪತ್ರ ಬರೆದ್ರೂ ಕ್ರಮ ಆಗಲಿಲ್ಲ.
ಕರ್ನಾಟಕದ ಇತಿಹಾಸದಲ್ಲೇ ಗುತ್ತಿಗೆದಾರರ ಸಂಘದವರು ಯಾವಾಗಲೂ ಪತ್ರ ಬರೆದಿಲ್ಲ, ಅನುದಾನ ಕೇಳಿದ್ರೆ ಕಮಿಷನ್ ಕೇಳ್ತಾರೆಂದು ರೂಪ್ಸಾ ಸಂಘಟನೆಯವರು ಕೂಡ ಪಿಎಂಗೆ ಪತ್ರ ಬರೆದಿದ್ದಾರೆ, ಇನ್ನು ಬಿಜೆಪಿಯವರು ಮಠದ ಅನುದಾನದಲ್ಲೂ ಕಮಿಷನ್ ಕೇಳ್ತಾರೆ ಎಂದು ಸ್ವಾಮೀಜಿ ಒಬ್ಬರು ಹೇಳಿದ್ದಾರೆ. ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಇದೇ ವಿಚಾರವಾಗಿ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ, ಕಾಮಗಾರಿ ಬಿಲ್ ಸಿಗದಿದ್ದಕ್ಕೆ ಮಾಜಿ ಸಚಿವ ಕೆಎಸ್ ಈಶ್ವರಪ್ಪಗೆ ಕಮಿಷನ್ ಕೊಡುವ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಧರಣಿ ಕುಳಿತಿದ್ದಕ್ಕೆ ಈಶ್ವರಪ್ಪ ರಾಜೀನಾಮೆಗೆ ಕೊಟ್ರು ಎಂದು ವಾಗ್ದಾಳಿ ನಡೆಸಿದರು.
ಪಿಎಸ್ಐ ನಂದೀಶ್ ಕೆಆರ್ ಪುರಂ ಠಾಣೆಗೆ ವರ್ಗಾವಣೆಗಾಗಿ ಸಾಲ ಮಾಡಿ 70 ಲಕ್ಷ ಕೊಟ್ಟಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎದೆ ಬಗೆದ್ರೆ ಸಿದ್ದರಾಮಯ್ಯ ಕಾಣ್ತಾನೇ ಎಂದು ಹೇಳಿದ್ದ ಎಂಟಿಬಿ ನಾಗರಾಜ್ ಹೇಳಿದ್ದರು. 2500 ಕೋಟಿ ಕೊಟ್ರೇ ಸಿಎಂ ಆಗಬಹುದೆಂದು ಶಾಸಕ ಯತ್ನಾಳ್ ಹೇಳ್ತಾರೆ, ಪಿಎಸ್ ಆಯ್ಕೆಯಲ್ಲಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ಮೂಗಿನ ನೇರಕ್ಕೆ ಇದೆ ಎಂದು ಯತ್ನಾಳ್ ಹೇಳ್ತಾರೆ. ಬಿಜೆಪಿಗರು ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂದು ಲೇವಡಿ ಮಾಡಿದರು.