ದಾವಣಗೆರೆ: ಏಳು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಇಬ್ಬರು ಯುವಕರನ್ನು ಬಂಧಿಸಿದ ಘಟನೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ.
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ : ಇಬ್ಬರು ಕಾಮುಕರು ಅಂದರ್ - ಲೈಂಗಿಕ ದೌರ್ಜನ್ಯ
ಅಪ್ರಾಪ್ತ ಬಾಲಕಿಯ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಇಬ್ಬರು ಯುವಕರನ್ನು ಬಂಧಿಸಿ, ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಣೇಶ್ ಮತ್ತು ಕಿರಣ್ ಬಂಧಿತರು. ಬಾಲಕಿಯ ತಾಯಿಯ ತಮ್ಮನ ಗೆಳೆಯರಾಗಿದ್ದ ಕಿರಣ್ ಮತ್ತು ಗಣೇಶ್ ಆಗಾಗ ಇವರ ಮನೆಗೆ ಬರುತ್ತಿದ್ದರು. ಹಲವು ಬಾರಿ ಊಟ ಮಾಡಿ ಇಲ್ಲಿಯೇ ತಂಗುತ್ತಿದ್ದರು.
ಆದರೆ ಫೆಬ್ರವರಿ 27 ರಂದು ಬಾಲಕಿಯ ಜೊತೆಗೆ ಕಿರಣ್ ಎಂಬಾತ ವಿವಸ್ತ್ರನಾಗಿ ಮಲಗಿಕೊಂಡಿದ್ದು ಬಾಲಕಿಯ ತಾಯಿಯ ಗಮನಕ್ಕೆ ಬಂದಿದೆ. ಬಾಲಕಿಯನ್ನು ಆಕೆಯ ತಾಯಿ ವಿಚಾರಿಸಿದಾಗ ಗಣೇಶ್ ಸಹ ಆಗಾಗ ಬೆತ್ತಲಾಗಿ ಮಲಗಿಕೊಳ್ಳುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಇಬ್ಬರು ಯುವಕರ ವಿರುದ್ಧ ಬಾಲಕಿ ತಾಯಿ ಸಂತೆಬೆನ್ನೂರು ಪೊಲೀಸರಿಗೆ ದೂರು ನೀಡಿದ್ದಾರೆ. ಅರೋಪಿಗಳ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.