ಕರ್ನಾಟಕ

karnataka

ETV Bharat / state

ವಿಶ್ವನಾಥ್​ರನ್ನು ಹೊಗಳಿ ಸಾ. ರಾ. ಮಹೇಶ್​ರನ್ನು ಕುಟುಕಿದ ರೇಣುಕಾಚಾರ್ಯ

ಸಾ. ರಾ. ಮಹೇಶ್ ಹಿರಿಯ ರಾಜಕಾರಣಿ ವಿಶ್ವನಾಥ್​ ಬಗ್ಗೆ ಕೀಳಾಗಿ ಮಾತನಾಡುವುದು ಸರಿಯಲ್ಲ. ಸಾ. ರಾ. ಮಹೇಶ್ ಮಂತ್ರಿಯಾಗಿ ಮಜಾ ಮಾಡಿದರು. ಆದ್ರೆ, ಈಗ ಅಧಿಕಾರ ಇಲ್ಲ ಎಂಬ ಕಾರಣಕ್ಕೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ವಿಶ್ವನಾಥ್ ಪರ ಮಾತನಾಡಿದ್ದಾರೆ.

ವಿಶ್ವನಾಥ್ ಪರ ರೇಣುಕಾಚಾರ್ಯ ಬ್ಯಾಟಿಂಗ್

By

Published : Oct 19, 2019, 2:24 AM IST

ದಾವಣಗೆರೆ: ಅನರ್ಹ ಶಾಸಕ ಹೆಚ್. ವಿಶ್ವನಾಥ್ ಹಾಗೂ ಮಾಜಿ ಸಚಿವ ಸಾ. ರಾ. ಮಹೇಶ್ ನಡುವಿನ ಆಣೆ ಪ್ರಮಾಣದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಅವರು ವಿಶ್ವನಾಥ್ ಪರ ಬ್ಯಾಟಿಂಗ್ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹಿಂದುಳಿದ ವರ್ಗದ ನಾಯಕ ಹೆಚ್. ವಿಶ್ವನಾಥ್ ಬಗ್ಗೆ ಹಗುರವಾಗಿ ಸಾ. ರಾ. ಮಹೇಶ್ ಮಾತನಾಡುವುದು ಸರಿಯಲ್ಲ. ವಿಶ್ವನಾಥ್​​ ಹಿರಿಯ ರಾಜಕಾರಣಿ, ಅನುಭವಿ ಕೂಡ ಹೌದು. ವಿಶ್ವನಾಥ್ ಅವರನ್ನು ಆಣೆ ಪ್ರಮಾಣಕ್ಕೆ ಸಾ. ರಾ. ಮಹೇಶ್ ಕರೆದದ್ದು ಎಷ್ಟು ಸಮಂಜಸ. ಅವರ ಬಗ್ಗೆ ಈ ರೀತಿ ಕೀಳಾಗಿ ಮಾತನಾಡುವುದು ಸರಿಯಲ್ಲ. ಸಾ. ರಾ. ಮಹೇಶ್ ಮಂತ್ರಿಯಾಗಿ ಮಜಾ ಮಾಡಿದರು. ಆದ್ರೆ, ಈಗ ಅಧಿಕಾರ ಇಲ್ಲ ಎಂಬ ಕಾರಣಕ್ಕೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ವಿಶ್ವನಾಥ್ ಪರ ರೇಣುಕಾಚಾರ್ಯ ಬ್ಯಾಟಿಂಗ್

ಬಿಜೆಪಿ ಪಕ್ಷದಲ್ಲಿ ಸಿಎಂ ಬಿ.ಎಸ್​​. ಯಡಿಯೂರಪ್ಪ ಪಕ್ಷಾತೀತ ನಾಯಕರು. ಯಾವುದೇ ಕಾರಣಕ್ಕೂ ಅವರನ್ನು ಸೈಡ್ ಲೈನ್ ಮಾಡುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪರ ನಾಯಕತ್ವದಲ್ಲಿ ಚುನಾವಣೆ ಎದುರಿಸಿ, ಗೆದ್ದ ಬಳಿಕ ಅವರನ್ನು ಯಾಕೆ ಸೈಡ್ ಲೈನ್ ಮಾಡಲಾಗುತ್ತದೆ ಎಂದು ಪ್ರಶ್ನಿಸಿದರು. ಸಂಸದರು, ಶಾಸಕರು, ಸಚಿವರು, ಕಾರ್ಯಕರ್ತರು ಎಲ್ಲರೂ ಬಿಎಸ್​​​ವೈ ಜೊತೆಗಿದ್ದೇವೆ. ಕರ್ನಾಟಕದಲ್ಲಿ ಕಮಲ ಅರಳಿಸಿದ ಮಹಾನ್ ನಾಯಕ ಯಡಿಯೂರಪ್ಪ. ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಯಡಿಯೂರಪ್ಪ ಹೋಗದ ಹಳ್ಳಿಗಳಿಲ್ಲ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಯಡಿಯೂರಪ್ಪರ ನಾಯಕತ್ವ ವಿಚಾರದಲ್ಲಿ ಬದಲಾವಣೆ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೂ ಸಹ ಯಡಿಯೂರಪ್ಪರ ನಾಯಕತ್ವದಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ. ಹಾಗಾಗಿ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.

ABOUT THE AUTHOR

...view details