ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ಇಲಿ ಜ್ವರ ದೃಢ: ಮಹಿಳೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು

ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದ ಮಹಿಳೆಯೋರ್ವರಿಗೆ ಇಲಿ ಜ್ವರ ದೃಢಪಟ್ಟಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಿಲಾಗಿದೆ.

rat
ಇಲಿ

By

Published : Jan 26, 2021, 8:47 PM IST

Updated : Jan 26, 2021, 9:50 PM IST

ದಾವಣಗೆರೆ:ಜಿಲ್ಲೆಯ ಮಹಿಳೆಯೋರ್ವರಿಗೆ ಇಲಿ ಜ್ವರ ದೃಢವಾಗಿದ್ದು, ಆಕೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯ ನ್ಯಾಮತಿ ಪಟ್ಟಣದ (ತಾಲೂಕು ಕೇಂದ್ರ) 48 ವರ್ಷದ ಮಹಿಳೆಯಲ್ಲಿ ಇಲಿ ಜ್ವರ ಪತ್ತೆಯಾಗಿದ್ದು, ನ್ಯಾಮತಿ ತಾಲೂಕಿನ ಜನರನ್ನು ಆತಂಕಕ್ಕೆ ದೂಡಿದಂತಾಗಿದೆ. ಇನ್ನು ದಾವಣಗೆರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ನೇತೃತ್ವದ ವೈದ್ಯರ ತಂಡ ಮಹಿಳೆಯ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಮುಂಜಾಗ್ರತಾ ಕ್ರಮ ವಹಿಸಿರುವ ಸರ್ವೇಕ್ಷಣಾಧಿಕಾರಿ ರಾಘವನ್ ನೇತೃತ್ವದ ವೈದ್ಯರ ತಂಡ ಪರೀಶೀಲನೆ ನಡೆಸಿದಾಗ ಆ ಮಹಿಳೆಯ ಮನೆಯವರಿಗೆ ಯಾರಿಗೂ ಜ್ವರ ಕಂಡು ಬಂದಿಲ್ಲ ಎಂದು ದೃಢಪಡಿಸಿದ್ದಾರೆ. 48 ವರ್ಷದ ಮಹಿಳೆಗೆ ಮಾತ್ರ ಜ್ವರ ಕಂಡು ಬಂದಿದೆಯಂತೆ.

ಇನ್ನು ಇಲಿ ಜ್ವರ ಕಂಡುಬಂದ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಬಗ್ಗೆ ಮೆಗ್ಗಾನ್ ಆಸ್ಪತ್ರೆಯ ವೈದ್ಯರು ದಾವಣಗೆರೆ ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿದ್ದಾರೆ.

ಇದನ್ನೂ ಓದಿ:ಯುವತಿಯೊಂದಿಗೆ ಸಂಬಂಧ... ಯುವಕನಿಗೆ ಥಳಿಸಿ ಬೆಟ್ಟದ ಮೇಲಿಂದ ತಳ್ಳಿದ ಕುಟುಂಬಸ್ಥರು

Last Updated : Jan 26, 2021, 9:50 PM IST

ABOUT THE AUTHOR

...view details