ಕರ್ನಾಟಕ

karnataka

ETV Bharat / state

ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ್ ಎದುರು ರಾಹುಲ್​ ಪರ ಘೋಷಣೆ! - Rahul slogan

ದಾವಣಗೆರೆ ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ್ ಎದುರು ರಾಹುಲ್ ಪರ ಘೋಷಣೆ- ಚೌಕಿದಾರ್ ಮೋದಿ ಚೋರ್​ ಹೈ ಎಂದ ಕಾಂಗ್ರೆಸ್ ಕಾರ್ಯಕರ್ತರು- ಜಿಲ್ಲಾಧಿಕಾರಿ ಕಚೇರಿಗೆ ಸಿದ್ದೇಶ್ವರ್​ ನಾಮಪತ್ರ ಸಲ್ಲಿಸಲು ಆಗಮಿಸಿದ್ದ ವೇಳೆ ಘಟನೆ.

ಸಿದ್ದೇಶ್ವರ್

By

Published : Apr 4, 2019, 5:38 PM IST

ದಾವಣಗೆರೆ: ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ್ ಎದುರು ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ರಾಹುಲ್ ಎಂದು ಘೋಷಣೆ ಕೂಗಿದ್ದರಿಂದ ಬಿಜೆಪಿ ಮುಖಂಡರು ಮುಜುಗರ ಎದುರಿಸಿದ ಘಟನೆ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯಿತು.

ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ್ ಎದುರು ರಾಹುಲ್​, ರಾಹುಲ್​ ಎಂದು ಘೋಷಣೆ

ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಕುಟುಂಬ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಸಿದ್ದೇಶ್ವರ್​ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ಅಲ್ಲಿಯೇ ಇದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಚೌಕಿದಾರ್ ಮೋದಿ ಚೋರ್, ಚೌಕಿದಾರ್ ಚೋರ್ ಹೈ ಕೂಗಿದರು.

ಇದರಿಂದ ಸಿದ್ದೇಶ್ವರ್ ಅವರಿಗೆ ಪೆಚ್ಚು ಮೋರೆ ಇಡುವಂತ ಪರಿಸ್ಥಿತಿ ನಿರ್ಮಾಣವಾಯಿತು. ಬಳಿಕ ಪೊಲೀಸ್ ಭದ್ರತೆಯಲ್ಲಿ ಸಿದ್ದೇಶ್ವರ್​ ಅವರನ್ನು ಜಿಲ್ಲಾಧಿಕಾರಿ ಕಚೇರಿ ಒಳಗೆ ಕಳುಹಿಸಿದ ಪ್ರಸಂಗವೂ ನಡೆಯಿತು.

ABOUT THE AUTHOR

...view details