ದಾವಣಗೆರೆ:ಶಾಸಕ ರೇಣುಕಾಚಾರ್ಯ ಸಹೋದರನ ಮಗಚಂದ್ರಶೇಖರ ಸಾವು ಪ್ರಕರಣ ಸಂಬಂಧ ಆತ ಕಾಣೆಯಾದ ದಿನ ಒಂದೇ ಫೋನ್ ನಂಬರ್ನಿಂದ ಹತ್ತಕ್ಕೂ ಹೆಚ್ಚು ಸಲ ಕರೆ ಹಾಗೂ ಸಂದೇಶ ಬಂದಿರುವುದು ಬೆಳಕಿಗೆ ಬಂದಿದೆ. ಕರೆ ಹಾಗೂ ಮೆಸೇಜ್ ಮಾಡಿದ್ದವರು ಯಾರು ಎಂಬುದು ನಿಗೂಢವಾಗಿದೆ.
ಅಕ್ಟೋಬರ್ 30ರಂದು ರಾತ್ರಿ 10 ಗಂಟೆಯಿಂದ ನಿರಂತರವಾಗಿ ಒಂದೇ ನಂಬರ್ನಿಂದ ಕರೆ ಬಂದಿದೆ. ಹೊನ್ನಾಳಿ ಪೊಲೀಸರು ಆ ನಂಬರ್ ಬಗ್ಗೆ ಮಾಹಿತಿ ಪಡೆದು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಸಿಡಿಆರ್ ತೆಗೆಸಿ ನೋಡಿದಾಗ ಅಕ್ಟೋಬರ್ 30ರಂದು ರಾತ್ರಿ 10 ಗಂಟೆಯಿಂದ ಒಂದೇ ದೂರವಾಣಿ ನಂಬರ್ನಿಂದ ಕರೆಗಳು ಮೃತ ಚಂದ್ರಶೇಖರಗೆ ಬಂದಿವೆ ಎಂಬುದು ಗೊತ್ತಾಗಿದೆ.