ಕರ್ನಾಟಕ

karnataka

By

Published : Jul 7, 2020, 4:49 PM IST

ETV Bharat / state

ಜಗಳೂರಿನಲ್ಲಿ ಕೊರೊನಾ ಪತ್ತೆ: ಪಕ್ಕದ ಗ್ರಾಮಸ್ಥರಿಂದ ಸ್ವಯಂಪ್ರೇರಿತ ಲಾಕ್​ಡೌನ್​

ಜಗಳೂರು ತಾಲೂಕಿನಿಂದ 9 ಕಿಲೋ ಮೀಟರ್ ದೂರದ ಸಿದ್ದಮ್ಮಹಳ್ಳಿ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಲಾಕ್​ಡೌನ್ ಮಾಡಿದ್ದು, ಗ್ರಾಮದೊಳಗೆ ಯಾರೂ ಪ್ರವೇಶ ಮಾಡುವಂತಿಲ್ಲ ಎಂದು ಮನವಿ ಮಾಡಿದ್ದಾರೆ.

People Voluntarily lockdown at Jagalur Village
ಜಗಳೂರಿನಲ್ಲಿ ಕೊರೊನಾ ಪಾಸಿಟಿವ್ ಪತ್ತೆ

ದಾವಣಗೆರೆ:ಜಿಲ್ಲೆಯ ಜಗಳೂರಿನಲ್ಲಿ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾದ ಹಿನ್ನೆಲೆ ಪಕ್ಕದ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ತಮ್ಮ ಗ್ರಾಮವನ್ನು ಲಾಕ್​ಡೌನ್ ಮಾಡಿದ್ದಾರೆ.

ಜಗಳೂರು ತಾಲೂಕಿನಿಂದ 9 ಕಿಲೋ ಮೀಟರ್ ದೂರದ ಸಿದ್ದಮ್ಮಹಳ್ಳಿ ಗ್ರಾಮಸ್ಥರು ಸ್ವಯಂಪ್ರೇರಿತ ಲಾಕ್​ಡೌನ್ ಮಾಡಿದ್ದು, ಗ್ರಾಮದೊಳಗೆ ಯಾರೂ ಪ್ರವೇಶ ಮಾಡುವಂತಿಲ್ಲ. ಗ್ರಾಮದಿಂದ ಯಾರೂ ಹೊರಗೆ ಹೋಗುವಂತಿಲ್ಲ. ಬೆಂಗಳೂರು ಸೇರಿದಂತೆ ಬೇರೆ ಕಡೆಯಿಂದ ಬಂದವರು ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಪ್ರತಿಯೊಬ್ಬರು ಆಶಾ ಕಾರ್ಯಕರ್ತೆಯರು ಇಲ್ಲವೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಸ್ವ್ಯಾಬ್​ ಪರೀಕ್ಷೆ ಮಾಡಿಸಿಕೊಳ್ಳಬೇಕು.16 ದಿನ ಕ್ವಾರಂಟೈನ್​​ನಲ್ಲೇ ಉಳಿಯಬೇಕು. ಗ್ರಾಮದ ಪ್ರತಿಯೊಬ್ಬರೂ ಕೊರೊನಾ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಡಂಗೂರ ಹೊಡೆಯುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಸ್ವಯಂಪ್ರೇರಿತ ಲಾಕ್​ಡೌನ್​ಗೆ ಗ್ರಾಮ ಪಂಚಾಯತ್​ನ ಎಲ್ಲಾ ಸದಸ್ಯರು ಸಾಥ್ ನೀಡಿದ್ದಾರೆ.

For All Latest Updates

ABOUT THE AUTHOR

...view details