ಕರ್ನಾಟಕ

karnataka

ETV Bharat / state

ವಿಶ್ವ ಛಾಯಾಗ್ರಾಹಕ ದಿನಾಚರಣೆ ಅಂಗವಾಗಿ ಕ್ರೀಡಾಕೂಟ - kannadanews

ವಿಶ್ವ ಛಾಯಾಗ್ರಾಹಕ ದಿನಾಚರಣೆ ಅಂಗವಾಗಿ ಇಂದು ದಾವಣಗೆರೆಯಲ್ಲಿ ಛಾಯಾಗ್ರಾಹಕರು ಹಾಗೂ ಅವರ ಕುಟುಂಬದವರಿಗಾಗಿ ಕ್ರೀಡಾಕೂಟ ಏರ್ಪಡಿಸಲಾಗಿತ್ತು.

ವಿಶ್ವ ಛಾಯಗ್ರಾಹಕ ದಿನಾಚರಣೆ ಅಂಗವಾಗಿ ಕ್ರೀಡಾಕೂಟ ಆಯೋಜನೆ

By

Published : Jul 21, 2019, 7:27 PM IST

ದಾವಣಗೆರೆ:ವಿಶ್ವ ಛಾಯಾಗ್ರಾಹಕ ದಿನಾಚರಣೆ ಅಂಗವಾಗಿನಗರದ ಎವಿಕೆ ಕಾಲೇಜ್ ಆವರಣದಲ್ಲಿ ಛಾಯಾಗ್ರಾಹಕ ಕುಟುಂಬಗಳಿಗೆ ವಿವಿಧ ಕ್ರೀಡಾಕೂಟ ಆಯೋಜಿಸಲಾಗಿತ್ತು.ಕ್ರೀಡಾಕೂಟದಲ್ಲಿ, ಛಾಯಾಗ್ರಾಹಕರು ಹಾಗೂ ಅವರ ಕುಟುಂಬದವರು ಭಾಗವಹಿಸಿ ಫುಲ್ ಎಂಜಾಯ್​ ಮಾಡಿದ್ರು.

ಮಕ್ಕಳಿಗೆ ರನ್ನಿಂಗ್ ರೇಸ್, ಮಹಿಳೆಯರಿಂದ ಲೆಮೆನ್ ಅಂಡ್​ ಸ್ಪೂನ್ ಓಟ, ಗೋಣಿಚೀಲ ನಡಿಗೆ ಎಲ್ಲರ ಗಮನ ಸೆಳೆಯಿತು. ಪ್ರತಿವರ್ಷದಂತೆ ಈ ಬಾರಿಯೂ ಕ್ರೀಡಾಕೂಟ ಆಯೋಜಿಸಲಾಗಿದೆ. ಈ ಮೂಲಕ ಎಲ್ಲಾ ಕುಟುಂಬದವರು ಈ ಒಂದು ದಿನ ಸಂತೋಷವಾಗಿ ಕಾಲಕಳೆಯುತ್ತೇವೆ ಎಂದು ಛಾಯಾಗ್ರಾಹಕರ ಕುಟುಂಬದವರು ಹೇಳಿದರು.

ವಿಶ್ವ ಛಾಯಗ್ರಾಹಕ ದಿನಾಚರಣೆ ಅಂಗವಾಗಿ ಕ್ರೀಡಾಕೂಟ ಆಯೋಜನೆ

ಮುಂದಿನ ತಿಂಗಳು ನಗರದ ರೇಣುಕಾ ಮಂದಿರದಲ್ಲಿ ಅದ್ಧೂರಿಯಾಗಿ ವಿಶ್ವ ಛಾಯಾಗ್ರಾಹಕರ ದಿನ ಆಚರಣೆ ಮಾಡಲಾಗುತ್ತದೆ. ಅಲ್ಲಿ ಕ್ರೀಡಾಕೂಟದಲ್ಲಿ ಜಯಗಳಿಸಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಒಟ್ಟಾರೆ, ದಿನ ನಿತ್ಯ ಕ್ಯಾಮೆರಾ ಕಣ್ಣಿನಿಂದ ಮತ್ತೊಬ್ಬರ ಚಿತ್ರ ಸೆರೆ ಹಿಡಿಯುತ್ತಿದ್ದ ಛಾಯಾಹಕರು ಇಂದು ಕ್ರೀಡಾಕೂಟದಲ್ಲಿ ಭಾಗವಹಿಸಿ ಮನರಂಜನೆ ಪಡೆಯುವ ಮೂಲಕ ಖುಷಿಪಟ್ಟರು.

ABOUT THE AUTHOR

...view details