ಕರ್ನಾಟಕ

karnataka

ETV Bharat / state

ಚೀನಾ,ಪಾಕ್​ಗೆ ದಿಟ್ಟ ಉತ್ತರ ನೀಡಲು ಮೋದಿ ಸರ್ಕಾರ ಬದ್ಧ: ಪ್ರಹ್ಲಾದ್ ಜೋಶಿ

ಕೇಂದ್ರ ಸರ್ಕಾರ ಪ್ರತಿ ವರ್ಷ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುತ್ತಿದೆ. ಪ್ರಧಾನಿ ಮೋದಿಯವರು ಕೃಷಿ ತಜ್ಞ ಸ್ವಾಮಿನಾಥನ್ ವರದಿ ಜಾರಿಗೆ ಪ್ರಯತ್ನಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಅಲ್ಲದೆ, ನೆರೆಯ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.

dds
ಪ್ರಹ್ಲಾದ್ ಜೋಶಿ ಹೇಳಿಕೆ

By

Published : Jan 14, 2021, 9:06 PM IST

ದಾವಣಗೆರೆ: ನಮಗೆ ಚೀನಾ ಹಾಗೂ ಪಾಕಿಸ್ತಾನ ರಾಷ್ಟ್ರಗಳು ತೊಂದರೆ ಕೊಡುತ್ತಿದ್ದು, ಎರಡು ರಾಷ್ಟ್ರಗಳಿಗೆ ದಿಟ್ಟ ಉತ್ತರ ನೀಡಲು ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ

ಜಿಲ್ಲೆಯ ಹರಿಹರ‌ ತಾಲೂಕಿನ ಹನಗವಾಡಿ ಗ್ರಾಮದ ಬಳಿ ಇರುವ ಪಂಚಮಸಾಲಿ ಪೀಠದ ಹರ ಜಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು,ಒಂದು ಕಡೆ ದೇಶದ ರಕ್ಷಣೆ ಮತ್ತೊಂದು ಕಡೆ ರೈತ ರಕ್ಷಣೆಗೆ ಮೋದಿ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ವರ್ಷ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುತ್ತಿದೆ. ಕೃಷಿ ತಜ್ಞ ಸ್ವಾಮಿನಾಥನ್​ ಅವರ ವರದಿ ಜಾರಿಗೆ ಪ್ರಧಾನಿ ಪ್ರಯತ್ನಿಸಿದ್ದಾರೆ ಎಂದರು.

ಗಂಗಾ ನದಿ ಸ್ವಚ್ಛಗೊಳಿಸುತ್ತಿರುವ ಮಾದರಿಯಲ್ಲಿ ತುಂಗಭದ್ರಾ ನದಿಯನ್ನು ಸ್ವಚ್ಛಗೊಳಿಸಲು ಕೇಂದ್ರ ಸರ್ಕಾರ ಸಹಕರಿಸಲಿದ್ದು, ರಾಜ್ಯ ಸರ್ಕಾರದಿಂದ ಸೂಕ್ತ ಪ್ರಸ್ತಾವನೆ ಬಂದರೆ ಸ್ಪಂದಿಸುವುದಾಗಿ ಸಚಿವ ಜೋಶಿ ಹೇಳಿದರು.

ABOUT THE AUTHOR

...view details