ದಾವಣಗೆರೆ:ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ತುಂಗಾಭದ್ರಾ ನದಿ ಪ್ರವಾಹದಿಂದ ಸಂಕಷ್ಟಕ್ಕೀಡಾದ ಸಂತ್ರಸ್ತರಿಗೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಚೆಕ್ ಮತ್ತು ಪರಿಹಾರ ವಿತರಣೆ ಮಾಡಿದರು.
ನೆರೆ ಸಂತ್ರಸ್ತರಿಗೆ ಪರಿಹಾರಧನ ವಿತರಿಸಿದ ಶಾಸಕ ರೇಣುಕಾಚಾರ್ಯ
ಪ್ರವಾಹಕ್ಕೆ ತುತ್ತಾಗಿದ್ದ ದಾವಣಗೆರೆಯ ನ್ಯಾಮತಿ ತಾಲೂಕಿನ ಸಂತ್ರಸ್ತರಿಗೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಪರಿಹಾರಧನ ವಿತರಿಸಿದ್ರು.
ನ್ಯಾಮತಿ ಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಸಂತ್ರಸ್ತರಿಗೆ ಪರಿಹಾರಧನ ಸೇರಿದಂತೆ ಇತರೆ ಪರಿಹಾರ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ರೇಣುಕಾಚಾರ್ಯ, ನ್ಯಾಮತಿ ತಾಲೂಕು ಆಗಿ ಘೋಷಣೆಯಾಗಲು ತುಂಬಾನೇ ಕಷ್ಟಪಟ್ಟಿದ್ದೇನೆ. ಇದಕ್ಕಾಗಿ ಮುಖ್ಯಮಂತ್ರಿಗಳನ್ನು ಹಲವು ಬಾರಿ ಭೇಟಿ ಮಾಡಿದ್ದೆ. ಕೊನೆಗೂ ನ್ಯಾಮತಿ ತಾಲೂಕಾಗಿದೆ. ಈ ಭಾಗದ ಜನರ ಕಷ್ಟಕ್ಕೆ ಯಾವಾಗಲೂ ನೆರವಾಗುತ್ತೇನೆ ಎಂದರು.
ಯಾವುದೇ ಸರ್ಕಾರ ಇರಲಿ. ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತೇನೆ. ನನಗೆ ನನ್ನ ತಾಲೂಕಿನ ಅಭಿವೃದ್ಧಿ ಮುಖ್ಯ. ಈಗ ನಮ್ಮ ಸರ್ಕಾರ ಬಂದಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುತ್ತೇನೆ. ನ್ಯಾಮತಿ ತಾಲೂಕನ್ನು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದು ನನ್ನ ಜವಾಬ್ದಾರಿ ಎಂದು ಜನರಿಗೆ ಭರವಸೆ ನೀಡಿದರು.