ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತರಲ್ಲಿ ಒಂಟಿತನ ಕಾಡುತ್ತದೆಯಾ? ಮನಃಶಾಸ್ತ್ರಜ್ಞರು ಹೇಳೋದೇನು? - ಕೊರೊನಾ ವೈರಸ್​

ಕುಟುಂಬದವರಿಗೆ ಅನಾರೋಗ್ಯ ಸಮಸ್ಯೆ ಅಂದರೆ ಸಾಕು ಊರುಗಳಿಂದ ಓಡಿ ಬರುತ್ತಿದ್ದ ಸಂಬಂಧಿಕರು, ಇದೀಗ ಕೊರೊನಾ‌ ಬಂದಿದೆ ಅಂದ್ರೆ ಸಾಕು ಹತ್ತಿರವೂ ಸುಳಿಯಲ್ಲ. ಹೀಗಾಗಿಯೇ, ಕೊರೊನಾವನ್ನು ಕೇವಲ ದೈಹಿಕವಷ್ಟೇ ಅಲ್ಲ, ಮಾನಸಿಕವಾಗಿ ಎದುರಿಸುವ ಅನಿವಾರ್ಯತೆ ಇದೆ ಅಂತಾರೆ ತಜ್ಞ ವೈದ್ಯರು.

loneliness
ಒಂಟಿತನ

By

Published : Sep 10, 2020, 7:57 PM IST

ದಾವಣಗೆರೆ:ಬೇರೆ ಬೇರೆ ಕಾಯಿಲೆಗಳು ಬಂದರೆ ಮೊದಲು ವೈದ್ಯರು ಮೈಮುಟ್ಟಿ ಚಿಕಿತ್ಸೆ ನೀಡುತ್ತಾರೆ. ಕುಟುಂಬದವರು ಹಾಗೂ ಸಂಬಂಧಿಕರು ನೋಡಲು ಅವಕಾಶ ಇರುತ್ತದೆ. ಆದರೆ, ಕೊರೊನಾ ಸೋಂಕು ದೃಢಪಟ್ಟವರ ಪರಿಸ್ಥಿತಿಯೇ ಬೇರೆ. ಕೊರೊನಾ ಸೋಂಕು ಬಂದಾಕ್ಷಣ ಒಂಟಿತನ ಅನುಭವಿಸುತ್ತಾರೆ. ಹೀಗಾಗಿ, ಮಾನಸಿಕವಾಗಿ ಕುಂದುತ್ತಾರೆ. ಅವರಿಗೆ ಆತ್ಮಸ್ಥೈರ್ಯದ ಅವಶ್ಯಕತೆ ಇದೆ.

ಕೊರೊನಾ ಸೋಂಕು ಇದೆ ಎಂದಾಕ್ಷಣ ಜನರು ಆತಂಕಕ್ಕೆ ಒಳಗಾಗುತ್ತಾರೆ. ಶೇ.40ರಷ್ಟು ಮಂದಿಗೆ ಮೊದಲೇ ಈ ಬಗ್ಗೆ ಮಾಹಿತಿ ಇರುವ ಕಾರಣಕ್ಕೆ ಧೈರ್ಯವಾಗಿರುತ್ತಾರೆ.‌ ಆದರೆ, ಇನ್ನುಳಿದವರು ತಕ್ಷಣವೇ ಉದ್ವೇಗಕ್ಕೊಳಗಾಗುತ್ತಾರೆ. ಎಲ್ಲಿಗೂ ಹೋಗಿಲ್ಲ, ಸುರಕ್ಷಿತವಾಗಿದ್ದೆ. ಪಾಸಿಟಿವ್ ಬರಲು ಸಾಧ್ಯವೇ ಇಲ್ಲ ಎಂಬ ವಾದ ಮಂಡಿಸುತ್ತಾರೆ. ಆಗ ಅವರಲ್ಲಿ ಸಿಟ್ಟು, ಚಡಪಡಿಕೆ, ಆತಂಕ, ಭಯ ಅವರಲ್ಲಿ ಬರುತ್ತದೆ.‌ ದಿನ ಕಳೆದಂತೆ ಹೊಂದಿಕೊಳ್ಳುತ್ತಾರೆ. ಕೆಲವರು ಮೂರ್ನಾಲ್ಕು ದಿನಗಳಲ್ಲಿ ಗುಣಮುಖರಾದರೆ ಮತ್ತೆ ಕೆಲವರು ಆದಷ್ಟು ಬೇಗ ವಾಸಿಯಾಗುವುದಿಲ್ಲ.‌ ಈ ವೇಳೆ ಮತ್ತಷ್ಟು ಭೀತಿಗೆ ಒಳಗಾಗುತ್ತಾರೆ.

ಧೈರ್ಯ ತುಂಬುವುದು ಹೇಗೆ?:ಕೊರೊನಾ ಸೋಂಕಿತರನ್ನು ನೋಡುವಾಗ ವೈದ್ಯರು ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಧರಿಸುತ್ತಾರೆ. ಮೊದಲು ಫೋನ್ ಮಾಡಿ ಯಾವ ಹಂತದಲ್ಲಿ ಕೊರೊನಾ ಇದೆ ಎಂಬುದರ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ರೋಗಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿದ್ದರೆ ಫೋನ್​​ನಲ್ಲೇ ಮತ್ತಷ್ಟು ಧೈರ್ಯ ತುಂಬಲಾಗುತ್ತದೆ. ಕೆಲವರು ಹೆಚ್ಚು ಆತಂಕದಲ್ಲಿದ್ದರೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಚಿಕಿತ್ಸೆ ನೀಡಲಾಗುತ್ತದೆ.‌ ಇದರಿಂದಲೂ ಅವರಲ್ಲಿ ಧೈರ್ಯ ಕಾಣದಿದ್ದರೆ ಕೌನ್ಸೆಲಿಂಗ್ ಮಾಡಲಾಗುತ್ತದೆ. ಬಳಿಕ ಮತ್ತೆ ಚಿಕಿತ್ಸೆ ಮುಂದುವರಿಸಲಾಗುತ್ತದೆ.

ಮನಃಶಾಸ್ತ್ರಜ್ಞರು ಹೇಳೋದೇನು

ಸೋಂಕು ಬಂದರೆ ಜನರು ಏನಂದುಕೊಳ್ಳುತ್ತಾರೋ? ಯಾರಿಗೆಲ್ಲಾ ವೈರಾಣು ಹರಡಿದ್ದೇನೋ? ಮಾತ್ರವಲ್ಲ, ಕುಟುಂಬದ ಪರಿಸ್ಥಿತಿ ಏನು? ಎಂದು ಚಿಂತಾಕ್ರಾಂತರಾಗುತ್ತಾರೆ. ರಾತ್ರಿ ನಿದ್ರೆ ಬರಲ್ಲ. ಮುಂದೇನಾದರೂ ಸಮಸ್ಯೆ ಆಗುತ್ತದೆಯೇ ಎಂಬ ಬಗ್ಗೆ ದೀರ್ಘಾಲೋಚನೆ ಮಾಡುತ್ತಾರೆ. ಚಿಕಿತ್ಸೆ ಪಡೆದ ಬಳಿಕವೂ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ ಎಂದು ಮನಶಾಸ್ತ್ರ ತಜ್ಞ ಡಾ.ಮರುಳಸಿದ್ಧಪ್ಪ ಹೇಳುತ್ತಾರೆ.

ಇದೇನೂ ಮಾರಣಾಂತಿಕ ಕಾಯಿಲೆ ಅಲ್ಲ. ಬಂದಾಕ್ಷಣ ಸಾಯಲ್ಲ. ಬಿಪಿ, ಶುಗರ್, ಕಾಯಿಲೆಯಿಂದ ಬಳಲುತ್ತಿರುವವರು ಸೋಂಕಿನಿಂದ ಗುಣಮುಖರಾಗಿದ್ದಾರೆ.‌ ಮಾನಸಿಕವಾಗಿ ಧೈರ್ಯವಾಗಿರಬೇಕು. ಒಂದು ವಾರ ಚಿಕಿತ್ಸೆ ಪಡೆದರೆ ಸೋಂಕಿನಿಂದ ಮುಕ್ತರಾಗಿ ಹೊರ ಬರಬಹುದು. ಡಿಸ್ಚಾರ್ಜ್ ಆದ ಬಳಿಕ ಮೊದಲಿನಂತೆಯೇ ಇರುತ್ತೇವೆ ಎನ್ನುತ್ತಾರೆ ಕೊರೊನಾದಿಂದ ಗುಣಮುಖರಾದವರು.

ABOUT THE AUTHOR

...view details