ಕರ್ನಾಟಕ

karnataka

ETV Bharat / state

2A ಮೀಸಲು ಹೋರಾಟ; ಇಷ್ಟಲಿಂಗ ಪೂಜೆ ನೆರವೇರಿಸಿ ಹೆದ್ದಾರಿಯಲ್ಲಿ ಪ್ರತಿಭಟಿಸಿದ ಬಸವ ಜಯಮೃತ್ಯುಂಜಯ ಶ್ರೀ - ಬಾಡಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48

ಪಂಚಮಸಾಲಿ ಸಮಾಜಕ್ಕೆ 2 ಎ ‌ಮೀಸಲಾತಿ ಹಾಗೂ ಸಮಾಜದ ಎಲ್ಲ ಉಪಪಂಗಡಗಳನ್ನು ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಬಸವ ಜಯಮೃತ್ಯುಂಜಯ ಶ್ರೀಗಳು ಆಗ್ರಹಿಸಿದ್ದಾರೆ.

shree protest on Davangere highway
ಇಷ್ಟಲಿಂಗ ಪೂಜೆ ನೆರವೇರಿಸಿ ದಾವಣಗೆರೆ ಹೆದ್ದಾರಿಯಲ್ಲಿ ಶ್ರೀಗಳು ಪ್ರತಿಭಟನೆ

By ETV Bharat Karnataka Team

Published : Nov 10, 2023, 10:34 PM IST

Updated : Nov 10, 2023, 10:53 PM IST

ಇಷ್ಟಲಿಂಗ ಪೂಜೆ ನೆರವೇರಿಸಿ ಹೆದ್ದಾರಿಯಲ್ಲಿ ಪ್ರತಿಭಟಿಸಿದ ಶ್ರೀ

ದಾವಣಗೆರೆ:ಪಂಚಮಸಾಲಿ ಸಮಾಜದ 2 ಎ ‌ಮೀಸಲಾತಿ ಹಾಗೂ ಸಮಾಜದ ಎಲ್ಲ ಉಪಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕೆಂದು ಆಗ್ರಹಿಸಿ ಇಂದಿನಿಂದ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಏಳನೇ ಹಂತದ ಹೋರಾಟವನ್ನು ದಾವಣಗೆರೆಯಲ್ಲಿ ನಡೆಸಿದರು.

ನಗರದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಕೂತು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಹಾಗೂ ಭಕ್ತರು ಕೈಯಲ್ಲಿ ಲಿಂಗ ಹಿಡಿದು ಇಷ್ಟಲಿಂಗ ಪೂಜೆ ನೆರವೇರಿಸುವ ಮೂಲಕ 2ಎ ಮೀಸಲಾತಿ ಹೋರಾಟ ಇಂದಿನಿಂದ ಪ್ರಾರಂಭಿಸಿದರು.

ದಾವಣಗೆರೆ ಆವರಗೆರೆ ಬಳಿಯ ಚಿಂದೋಡಿ ಲೀಲಾ ಸಭಾಂಗಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ವೇಳೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮೀಸಲಾತಿ ಕೂಡಿಸಲು ಪ್ರಯತ್ನಿಸುವೆ ಎಂದು ಆಶ್ವಾಸನೆ ನೀಡಿದರು‌ ಬಳಿಕ ದಾವಣಗೆರೆ ಬಾಡಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48 ತಡೆದು ಇಷ್ಟಲಿಂಗ ಪೂಜೆ ನೆರವೇರಿಸುವ ಮೂಲಕ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಸಂದೇಶ ರವಾನಿಸಿದರು.‌ ಈ ಸಂದರ್ಭದಲ್ಲಿ ಶ್ರೀಗಳು 2A ಮೀಸಲಾತಿ, ಲಿಂಗಾಯತ ಉಪಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.‌ ಹೋರಾಟದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು.

ಬಸವ ಜಯಮೃತ್ಯುಂಜಯ ಶ್ರೀಗಳು ಹೇಳಿದ್ದಿಷ್ಟು :ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಹೋರಾಟದ ವೇದಿಕೆಯಲ್ಲಿ ಬಸವ ಜಯಮೃತ್ಯುಂಜಯ ಶ್ರೀಗಳು ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದು ದಾವಣಗೆರೆಯಲ್ಲಿ ನಡೆದ ಹೋರಾಟ ಸರ್ಕಾರದ ಕಣ್ಣು ತೆರೆಸಿತ್ತು. ಇದೀಗ ಮತ್ತೆ ದಾವಣಗೆರೆಯಲ್ಲಿ ಮೀಸಲಾತಿಗಾಗಿ ಹೋರಾಟ ಮಾಡ್ತಿದ್ದೇವೆ. ಸರ್ಕಾರ ಕಣ್ಣು ತೆರೆಯಲಿ, ಜಾತಿಗಣತಿಯನ್ನು ಸರ್ಕಾರ ಮಾಡಿದ್ರೆ ಅಭ್ಯಂತರ ಇಲ್ಲ ಮಾಡಲಿ, ಈಶ್ವರ ಖಂಡ್ರೆ ಹಾಗೂ ಶಾಮನೂರು ಶಿವಶಂಕರಪ್ಪ ಸಮಾಜಕ್ಕೆ ಶಕ್ತಿ ಇದ್ದಂತೆ‌ ಎಂದು ಹೇಳಿದರು.

ಜಾತಿಗಣತಿ ಬಿಡುಗಡೆಗೆ ಸಮಾಜ ಆತಂಕ ಪಡುತ್ತಿದೆ. ಜಾತಿಗಣತಿ ಕಾನೂನಾತ್ಮಕವಾಗಿ, ಸಂವಿಧಾನಾತ್ಮಕವಾಗಿರಲಿ. ಇನ್ನು ನಾವು ಮೀಸಲಾತಿಗೆ ವಿವಿಧ ಜಿಲ್ಲೆಗಳಲ್ಲಿ ಮಾಡಿದ ಹೋರಾಟಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಬಂದು ಮನವಿ ಪತ್ರ ಸ್ವೀಕಾರ ಮಾಡಿದ್ದರು. ಅದರಂತೆ ಇಲ್ಲಿಯೂ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಬಂದಿರುವುದು ಸಂತಸದ ವಿಚಾರವಾಗಿದೆ. ಇನ್ನು ಈ ಹೋರಾಟಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ಬರಬೇಕಿತ್ತು ಕಾರಣಾಂತರಗಳಿಂದ ಬಂದಿಲ್ಲ, 2ಎ ಮೀಸಲಾತಿಗೆ ಒತ್ತಾಯಿಸಿ ಸಚಿವ ಖಂಡ್ರೆ ಮೂಲಕ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಈ ವೇಳೆ ತಿಳಿಸಿದರು.

ಇದನ್ನೂಓದಿ:ಬಿ.ವೈ.ವಿಜಯೇಂದ್ರ ಕರ್ನಾಟಕ ಬಿಜೆಪಿಯ ನೂತನ ಸಾರಥಿ: ರಾಜ್ಯಾಧ್ಯಕ್ಷರಾಗಿ ನೇಮಕ

Last Updated : Nov 10, 2023, 10:53 PM IST

ABOUT THE AUTHOR

...view details