ದಾವಣಗೆರೆ : ದಾಖಲೆ ಇಲ್ಲದ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ಜಿಲ್ಲೆಯ ಜಗಳೂರು ತಾಲೂಕಿನ ಮುಸ್ಟೂರು ಚೆಕ್ ಪೋಸ್ಟ್ ಬಳಿ ವಶಪಡಿಸಿಕೊಳ್ಳಲಾಗಿದೆ.
ದಾಖಲೆ ಇಲ್ಲದ 18 ಲಕ್ಷ ಮೌಲ್ಯದ ಅಕ್ರಮ ಮದ್ಯ ಸೀಜ್.. ಎರಡು ಲಾರಿಗಳು ಖಾಕಿ ವಶಕ್ಕೆ - ದಾವಣಗೆರೆ
ದಾಖಲೆ ಇಲ್ಲದ 18 ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನು ಜಗಳೂರು ಜಿಲ್ಲೆಯ ಮುಸ್ಟೂರು ಚೆಕ್ ಪೋಸ್ಟ್ ಬಳಿ ಎರಡು ಲಾರಿಗಳಿಂದ ವಶಕ್ಕೆ ಪಡೆಯಲಾಯಿತು.
ಮುಸ್ಟೂರು ಚೆಕ್ ಪೋಸ್ಟ್ ಬಳಿ ವಶ
ಜಗಳೂರು ತಾಲೂಕಿನ ಮುಸ್ಟೂರು ಚೆಕ್ ಪೋಸ್ಟ್ ಬಳಿ ಎರಡು ಲಾರಿಗಳನ್ನು ತಪಾಸಣೆ ಮಾಡಿದಾಗ ಸುಮಾರು 18.26 ಲಕ್ಷ ರೂ. ಮೌಲ್ಯದ ಮದ್ಯ ಸಿಕ್ಕಿದ್ದು, ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಲಾರಿಗಳು ನಂಜನಗೂಡಿನಿಂದ ಕಲಬುರ್ಗಿ ಹಾಗೂ ಬಳ್ಳಾರಿಗೆ ಹೋಗುತ್ತಿದ್ದವು ಎಂದು ಹೇಳಲಾಗಿದೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.