ದಾವಣಗೆರೆ:''ನನಗೆ ಟೆಕೆಟ್ ಸಿಕ್ಕಿದ್ದರೆ ಹರಿಹರದಲ್ಲಿ ಕಾಂಗ್ರೆಸ್ ಕೈ ಮೇಲು ಗೈ ಸಾಧಿಸುತ್ತಿತ್ತು. ಬಿಜೆಪಿ ಸೋಲುತ್ತಿತ್ತು. ಆದರೆ ಕೆಲವರ ಪಿತೂರಿಯಿಂದ ಟಿಕೆಟ್ ಕೈ ತಪ್ಪಿತು'' ಎಂದು ಹರಿಹರದ ಮಾಜಿ ಕಾಂಗ್ರೆಸ್ ಶಾಸಕ ಎಸ್. ರಾಮಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ನಾನು 590 ಕೋಟಿ ರೂ. ಅನುದಾನವನ್ನು ಹರಿಹರ ಕ್ಷೇತ್ರಕ್ಕೆ ತಂದಿದ್ದೇನೆ. ಇನ್ನೂ ಸಾಕಷ್ಟು ಅಭಿವೃದ್ಧಿ ಮಾಡುತ್ತಿದೆ. ಇನ್ನೂ ಟಿಕೆಟ್ಗಾಗಿ ಐದು ಸರ್ವೆಗಳಲ್ಲೂ ನನ್ನ ಹೆಸರೇ ಇತ್ತು. ಕಾಣದ ಕೈಗಳಿಂದ ಷಡ್ಯಂತ್ರ ನಡೆದಿದ್ದು, ನಮ್ಮ ಪಕ್ಷ ವಿರೋಧ ಪಕ್ಷದಲ್ಲಿದ್ದರೂ ಶಾಸಕನಾಗಿ ಅನುದಾನ ತಂದು ಕೆಲಸ ಮಾಡಿದೆ. ಈಗ ನನಗೆ ಟಿಕೆಟ್ ನೀಡಿದ್ದರೆ ಗೆದ್ದು, ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಲು ಅನುಕೂಲ ಆಗುತ್ತಿತ್ತು. ಆದರೆ, ಬಿ ಫಾರಂ ತಪ್ಪಿಸಲಾಯಿತು. ಕಾಗಿನೆಲೆ ಶ್ರೀ, ಪಂಚಮಪೀಠದ ಸ್ವಾಮಿಜಿಗಳು ಟಿಕೆಟ್ ತಪ್ಪಿಸಲು ಪತ್ರ ಬರೆದಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸ್ವಾಮಿಜಿಯವರು ಪತ್ರ ಬರೆದಿಲ್ಲ ಎಂದು ಭಾವಿಸಿರುವೆ'' ಎಂದರು.
ಇದನ್ನೂ ಓದಿ:1.15 ಕೋಟಿ ರೂ. ವಂಚನೆ ಪ್ರಕರಣ: ಆರೋಪಿ ಕಳತ್ತೂರು ವಿಶ್ವನಾಥ್ ಶೆಟ್ಟಿ ಬಂಧನ
ವಿಧಾನ ಪರಿಷತ್ ಸದಸ್ಯ ಸ್ಥಾನ ಕಲ್ಪಿಸಿ:''2023ರ ಚುನಾವಣೆಯಲ್ಲಿ ಹರಿಹರದಲ್ಲಿ ಬಿಜೆಪಿ ಗಾಳಿಯಲ್ಲಿ ಗೆದ್ದು ಬಂದಿದೆ. ಈ ಭಾರಿ ಅತೀ ಹೆಚ್ಚಿನ ಅಂತರದಲ್ಲಿ ಸುಲಭವಾಗಿ ಗೆಲ್ಲುತ್ತಿದೆ. ಆದರೆ ನನಗೆ ಮೋಸ ಆಗಿದೆ. ಗೆಲ್ಲುವಂತಹ ಶಾಸಕನಿಗೆ ಟೆಕೆಟ್ ತಪ್ಪಿಸಲಾಗಿದೆ. ಹೀಗಾಗಿ ಎಂಎಲ್ಸಿ ಮಾಡಿ ಎಂದು ಕೇಳಿದ್ದೇನೆ. ನಿಗಮ ಮಂಡಳಿ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ. ಅಂತಿಮವಾಗಿ ಪಕ್ಷದ ನಿರ್ಧಾರಕ್ಕೆ ಬದ್ದನಾಗಿ ಇರುತ್ತೇನೆ'' ಎಂದು ರಾಮಪ್ಪ ತಿಳಿಸಿದರು.