ಕರ್ನಾಟಕ

karnataka

ETV Bharat / state

ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ.. ಪ್ರಯಾಣಿಕ ಸ್ನೇಹಿಯಾಗಿಸುವ ಕನಸು ಸನ್ನಿಹಿತ - Davanagere Railway station

ಅಂದಾಜು 20 ಕೋಟಿ ರೂ. ಅನುದಾನದಲ್ಲಿ ಈ ನಿಲ್ದಾಣಕ್ಕೆ ಹೈಟೆಕ್‌ ಟಚ್‌ ನೀಡಲಾಗಿದೆ. ಕೊರೊನಾ ಸಂಕಷ್ಟಕ್ಕೂ ಮುನ್ನ ಈ ನಿಲ್ದಾಣದ ಮೂಲಕ ನಿತ್ಯವೂ, ಗೂಡ್ಸ್‌ ಹಾಗೂ ಪ್ಯಾಸೆಂಜರ್‌ ರೈಲು ಸೇರಿ ಕನಿಷ್ಠ 44 ರೈಲುಗಳು ಸಂಚರಿಸುತ್ತಿದ್ದವು. ಪ್ರಸ್ತುತ 22 ರೈಲು ಸಂಚರಿಸುತ್ತಿದ್ದವು. ಉದ್ಘಾಟನೆಯ ನಂತರ 36 ರೈಲುಗಳು ಸಂಚರಿಸುವ ನಿರೀಕ್ಷೆ ಇದೆ..

high-tech-touch-to-davanagere-railway-station
ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ

By

Published : Apr 3, 2021, 6:10 PM IST

ದಾವಣಗೆರೆ :ಇಲ್ಲಿನ ರೈಲ್ವೆ ನಿಲ್ದಾಣ ಹಲವು ವರ್ಷಗಳಿಂದ ಕಾಯಕಲ್ಪಕ್ಕಾಗಿ ಕಾಯುತ್ತಿತ್ತು. ದಶಕಗಳ ಹಿಂದಿನ ಜನರ ಬೇಡಿಕೆ ಇದೀಗ ಈಡೇರಿದೆ. ರೈಲ್ವೆ ನಿಲ್ದಾಣ ಹೈಟೆಕ್ ಸ್ಪರ್ಶ ಪಡೆದಿದೆ.

ಸಂಸದ ಜಿ ಎಂ ಸಿದ್ದೇಶ್ವರ್​ ಅವರ ಅವಧಿಯಲ್ಲೀಗ ರೈಲ್ವೆ ನಿಲ್ದಾಣದಕ್ಕೆ ಹೊಸ ರೂಪ ನೀಡಲಾಗಿದೆ. ಸತತ ಒಂದು ವರ್ಷಗಳ ನಿರಂತರ ಪರಿಶ್ರಮದಿಂದ ನಿಲ್ದಾಣವೀಗ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡಿದೆ.

ಈ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಐ ಲವ್‌ ದಾವಣಗೆರೆ ಎಂಬ ಆಕರ್ಷಕ ಬರಹಗಳು ಸ್ವಾಗತಿಸುತ್ತಿವೆ. ಸ್ವಚ್ಛಂದವಾಗಿ 100 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಾಡುತ್ತಿದ್ದು, ನಿಲ್ದಾಣಕ್ಕೆ ಹೊಸ ಚೈತನ್ಯ ನೀಡಿದೆ.

ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ

ಇನ್ನು, ನಿಲ್ದಾಣದೊಳಗೆ ವಿಮಾನ ನಿಲ್ದಾಣ ಮಾದರಿಯ ಟಿಕೆಟ್ ಬುಕ್ಕಿಂಗ್ ಕೌಂಟರ್​, ವಿಐಪಿ ಲಾಂಚ್, ಪ್ರಯಾಣಿಕರ ವಿಶ್ರಾಂತಿ ಗೃಹ, ಮಹಿಳೆಯರ ನಿರೀಕ್ಷಣಾ ಕೊಠಡಿ, ಎಕ್ಸ್‌ಲೇಟರ್​ ಅಳವಡಿಸಲಾಗಿದೆ.

ಅಂದಾಜು 20 ಕೋಟಿ ರೂ. ಅನುದಾನದಲ್ಲಿ ಈ ನಿಲ್ದಾಣಕ್ಕೆ ಹೈಟೆಕ್‌ ಟಚ್‌ ನೀಡಲಾಗಿದೆ. ಕೊರೊನಾ ಸಂಕಷ್ಟಕ್ಕೂ ಮುನ್ನ ಈ ನಿಲ್ದಾಣದ ಮೂಲಕ ನಿತ್ಯವೂ, ಗೂಡ್ಸ್‌ ಹಾಗೂ ಪ್ಯಾಸೆಂಜರ್‌ ರೈಲು ಸೇರಿ ಕನಿಷ್ಠ 44 ರೈಲುಗಳು ಸಂಚರಿಸುತ್ತಿದ್ದವು. ಪ್ರಸ್ತುತ 22 ರೈಲು ಸಂಚರಿಸುತ್ತಿದ್ದವು. ಉದ್ಘಾಟನೆಯ ನಂತರ 36 ರೈಲುಗಳು ಸಂಚರಿಸುವ ನಿರೀಕ್ಷೆ ಇದೆ.

ಈ ನಿಲ್ದಾಣದ ಮೂಲಕ ನಿತ್ಯವೂ 9 ರಿಂದ 10 ಸಾವಿರ ಪ್ರಯಾಣಿಕರು ಸಂಚರಿಸಲಿದ್ದಾರೆ. ಆಧುನಿಕ ತಂತ್ರಜ್ಞಾನ ಹಾಗೂ ಸೌಲಭ್ಯ ಹೊಂದಿರುವ ಈ ನಿಲ್ದಾಣ ಸಾರ್ವಜನಿಕರಲ್ಲಿ ಹೊಸ ಉತ್ಸಾಹ ಮೂಡಿಸಲಿದೆ.

ಇದೀಗ ಈ ನಿಲ್ದಾಣದ ನಾಮಕರಣಕ್ಕೆ ಹಲವು ಹೆಸರುಗಳು ಕೇಳಿ ಬಂದಿವೆ. ಆದರೆ, ಈವರೆಗೂ ಯಾವುದೇ ಹೆಸರು ಫೈನಲ್‌ ಆಗಿಲ್ಲ. ದಾವಣಗೆರೆಯಲ್ಲಿರುವ ಗ್ಲಾಸ್​​​ಹೌಸ್‌ ಈಗಾಗಲೇ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದು ಪ್ರವಾಸಿಗರನ್ನು ಸೆಳೆಯುತ್ತಿದೆ.

ಇದೇ ಮಾದರಿ ರೈಲ್ವೆ ನಿಲ್ದಾಣವೂ ಹೈಟೆಕ್‌ ತಂತ್ರಜ್ಞಾನದೊಂದಿಗೆ ಮರು ನಿರ್ಮಾಣಗೊಂಡಿದೆ. ಇದೂ ಸಹಾ ದಾವಣಗೆರೆಯ ಪ್ರಮುಖ ಆಕರ್ಷಣೀಯ ಸ್ಥಳಗಳಲ್ಲಿ ಒಂದಾಗುವ ಎಲ್ಲಾ ನಿರೀಕ್ಷೆ ಹುಟ್ಟು ಹಾಕಿದೆ.

ಇದನ್ನೂ ಓದಿ:ರಾಯಣ್ಣನ ಪುತ್ಥಳಿ ಅನಾವರಣಕ್ಕೆ ಸಿದ್ದರಾಮಯ್ಯ ಬರಬೇಕೆಂದು ಪಟ್ಟು ಹಿಡಿದ ಗ್ರಾಮಸ್ಥರು: ಮುಂದೇನಾಯ್ತು?

ABOUT THE AUTHOR

...view details