ಕರ್ನಾಟಕ

karnataka

ETV Bharat / state

ಭಾರಿ ಮಳೆಗೆ ಜಲಾವೃತಗೊಂಡ ಹೊಲ, ಗದ್ದೆಗಳು

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಯಿಂದ ಹೊಲ, ಗದ್ದೆಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದೆ. ಸೂಳಿಕೆರೆಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಸಂಪೂರ್ಣವಾಗಿ ಮುಳುಗಿದೆ.

heavy rain fall in davanager
ಭಾರಿ ಮಳೆಗೆ ಜಲವಾವೃತಗೊಂಡ ಹೊಲ, ಗದ್ದೆಗಳು

By

Published : Sep 9, 2020, 9:40 PM IST

ಹರಿಹರ: ಮಂಗಳವಾರ ರಾತ್ರಿ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಹೊಲ, ಗದ್ದೆಗಳಿಗೆ ನೀರು ನುಗ್ಗಿ, ಬೆಳೆಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ.

ಭಾರಿ ಮಳೆಗೆ ಜಲವಾವೃತಗೊಂಡ ಹೊಲ, ಗದ್ದೆಗಳು

ಮಳೆ ಮಾಪಕ: ಬುಧವಾರ ಬೆಳಿಗ್ಗೆ 8ರವರೆಗೆ ದಾಖಲಾದಂತೆ ಹರಿಹರದಲ್ಲಿ 22 ಮಿ.ಮೀ., ಮಲೆಬೆನ್ನೂರು 40.8 ಮಿ.ಮೀ., ಕೊಂಡಜ್ಜಿ 35.2, ಸಿರಿಗೆರೆಯಲ್ಲಿ 50.02.ಮಿ.ಮೀ. ಸೇರಿದಂತೆ ಒಟ್ಟು 148.2 ಮಿ.ಮೀ., ಆಗಿದ್ದು, ಸರಾಸರಿ 37.05 ಮಿ.ಮೀ. ಮಳೆಯಾಗಿದೆ.

ಭಾರಿ ಮಳೆಗೆ ಜಲವಾವೃತಗೊಂಡ ಹೊಲ, ಗದ್ದೆಗಳು

ಕಳೆದ 15 ದಿನಗಳಿಂದ ನಡೆಸಿದ್ದ ಭತ್ತದ ನಾಟಿ ಹಾಗೂ ಇತರೆ ನೂರಾರು ಎಕರೆ ಬೆಳೆಗಳಿಗೆ ಹಾನಿಯಾಗಿದೆ. ಮಳೆ ಹಾಗೂ ಮೈದುಂಬಿದ ಕಾಲುವೆಗಳ ನೀರು ನುಗ್ಗಿ ಭತ್ತದ ಗದ್ದೆಗಳು ಕರೆಗಳ ಸ್ವರೂಪ ಪಡೆದಿವೆ. ತಾಲೂಕಿನ ಭಾನುವಳ್ಳಿ, ಲಕ್ಕಶೆಟ್ಟಿಹಳ್ಳಿ, ಎಕ್ಕೆಗೊಂದಿ, ಬ್ಯಾಲದಹಳ್ಳಿ, ರಾಮತೀರ್ಥ, ನಾಗೇನಹಳ್ಳಿ, ಕಮಲಾಪುರ, ಸಿರಿಗೆರೆ ಹಾಗೂ ಇತರೆ ಗ್ರಾಮಗಳ ನೂರಾರು ಎಕರೆ ಭತ್ತದ ಗದ್ದೆ ಜಲಾವೃತವಾಗಿವೆ.

ಭತ್ತದ ಸಸಿ ಚಿಕ್ಕದಾಗಿದ್ದು, ನೀರಿನ ರಭಸದಲ್ಲಿ ಕೊಚ್ಚಿ ಹೋಗಿವೆ. ರೈತರು ಮತ್ತೊಮ್ಮೆ ಸಸಿ ನಾಟಿ ಮಾಡುವ ಸಂಕಷ್ಟಕ್ಕೀಡಾಗಿದ್ದಾರೆ.

ಸೇತುವೆ ಜಲಾವೃತ: ಬೆಳ್ಳೂಡಿ ರಾಮತೀರ್ಥ ನಡುವಿನ ಸೂಳೆಕೆರೆ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬುಧವಾರ ಬೆಳಗ್ಗೆ ಜಲಾವೃತಗೊಂಡಿದೆ. ಸೇತುವೆ ಮೇಲೆ ನೀರು ಹರಿಯುತ್ತಿರುವ ಕಾರಣ ವಾಹನ ಸವಾರರು ಭಯ ಪಡುತ್ತಲೇ ಸಾಗಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಹಳ್ಳದ ನೀರು ಸೇತುವೆಯ ರಕ್ಷಾ ಗೋಡೆ ಮೇಲೆ ಹರಿಯುತ್ತಿದ್ದು, ಹಿಂದಿನಂತೆ ಮತ್ತೆ ಸೇತುವೆಗೆ ಧಕ್ಕೆಯಾಗುವ ಅಪಾಯ ಎದುರಾಗಿದೆ.

ಸಮೀಕ್ಷೆ: ಕಂದಾಯ ಇಲಾಖೆ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು, ಕೃಷಿ ಇಲಾಖೆಯ ಪಿ.ವಿ ಗೋವರ್ಧನ್, ತೋಟಗಾರಿಕೆ ಇಲಾಖೆ ರೇಖಾ ಹಾಗೂ ಇತರೆ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ತಾಲೂಕಿನಲ್ಲಿ ಸಂಚರಿಸಿ ಬೆಳೆ ಹಾನಿ, ಮನೆ ಹಾನಿ ಕುರಿತು ಸಮೀಕ್ಷೆ ನಡೆಸಿದರು.

ABOUT THE AUTHOR

...view details