ದಾವಣಗೆರೆ:ನಗರದ ಪಿಬಿ ರಸ್ತೆಯಲ್ಲಿ ಬೈಕ್ ಸವಾರರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದ ಮುಖ್ಯ ಪೊಲೀಸ್ ಪೇದೆ ಹಾಗೂ ಹಾಗೂ ಎಎಸ್ಐ ಇಬ್ಬರನ್ನೂ ಎಸ್ಪಿ ಹನುಮಂತರಾಯ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಬೈಕ್ ಸವಾರನಿಂದ ಅಕ್ರಮವಾಗಿ ಹಣ ವಸೂಲಿ: ಮುಖ್ಯ ಪೊಲೀಸ್ ಪೇದೆ-ಎಎಸ್ಐ ಅಮಾನತು - ದಾವಣಗೆರೆಯಲ್ಲಿ ಅಕ್ರಮ ಹಣ ವಸೂಲಿ
ದಾವಣಗೆರೆಯಲ್ಲಿ ಬೈಕ್ ಸವಾರನಿಗೆ ರಶೀದಿ ನೀಡದೇ ಅಕ್ರಮವಾಗಿ ಹಣ ವಸೂಲಿ ಮಾಡಿದ್ದ ಮುಖ್ಯ ಪೊಲೀಸ್ ಪೇದೆ ಹಾಗೂ ಹಾಗೂ ಎಎಸ್ಐ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ.
ಮುಖ್ಯ ಪೊಲೀಸ್ ಪೇದೆ ಹಾಗೂ ಹಾಗೂ ಎಎಸ್ಐ ಅಮಾನತು
ಹೆಡ್ ಕಾನ್ಸ್ಸ್ಟೇಬಲ್ ರವಿ ಹಾಗೂ ಎಎಸ್ಐ ಜಯಣ್ಣ ಅಮಾನತುಗೊಂಡ ಪೊಲೀಸರು. ಹಾಡಹಗಲೇ ಬೈಕ್ ಸವಾರನಿಗೆ ರಶೀದಿ ನೀಡದೇ 600 ರೂಪಾಯಿ ಹಣ ವಸೂಲಿ ಮಾಡಿ ಜೇಬಿಗೆ ಇಳಿಸಿಕೊಂಡಿದ್ದರು ಎನ್ನಲಾಗಿದೆ. ಇನ್ನು ಈ ಅಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಈ ಹಿನ್ನೆಲೆ ಮುಖ್ಯ ಪೇದೆ ಹಾಗೂ ಎಎಸ್ಐ ಅವರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.