ಕರ್ನಾಟಕ

karnataka

ETV Bharat / state

ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆದರೆ, ವಿಜಯೇಂದ್ರ RTGS ಗಿರಾಕಿ: ಸಿದ್ದರಾಮಯ್ಯ

ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಒಬ್ಬರು ಬಿ.ಎಸ್​.ಯಡಿಯೂರಪ್ಪ, ಇನ್ನೊಬ್ಬರು ಅವರ ಮಗ ವಿಜಯೇಂದ್ರ ಡಿಫ್ಯಾಕ್ಟ್ ಮುಖ್ಯಮಂತ್ರಿ. ಬಿಎಎಸ್​ವೈ ಅವರಂತಹ ದುರ್ಬಲ, ಭ್ರಷ್ಟ, ಕೆಟ್ಟ ಮುಖ್ಯಮಂತ್ರಿ ಇತಿಹಾಸದಲ್ಲಿ ಎಲ್ಲೂ ಸಿಕ್ಕಿಲ್ಲ. ವಿಜಯೇಂದ್ರ ಆರ್​ಟಿಜಿಎಸ್ ಗಿರಾಕಿ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

former-cm-siddaramaiah-statement-about-yeddyurappa-and-vijayendra
ಮಾಜಿ ಸಿಎಂ ಸಿದ್ದರಾಮಯ್ಯ

By

Published : Jan 15, 2021, 3:29 PM IST

ದಾವಣಗೆರೆ:ಆಪರೇಷನ್ ಕಮಲದ ಜನಕ ಯಡಿಯೂರಪ್ಪ. ಚೆಕ್ ಮೂಲಕ ಯಡಿಯೂರಪ್ಪ ಲಂಚ ಪಡೆಯುತ್ತಿದ್ದ. ಆದರೆ, ಇದೀಗ ಆರ್​ಟಿಜಿಎಸ್ ಮೂಲಕ ಮಗ ವಿಜಯೇಂದ್ರ ಲಂಚ ತೆಗೆದುಕೊಳ್ಳುತ್ತಿದ್ದಾನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು‌.

ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಒಬ್ಬರು ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿ, ಇನ್ನೊಬ್ಬರು ಅವರ ಮಗ ವಿಜಯೇಂದ್ರ ಡಿಫ್ಯಾಕ್ಟ್ ಮುಖ್ಯಮಂತ್ರಿ. ಬಿಎಎಸ್​ವೈ ಅವರಂತಹ ದುರ್ಬಲ, ಭ್ರಷ್ಟ, ಕೆಟ್ಟ ಮುಖ್ಯಮಂತ್ರಿ ಇತಿಹಾಸದಲ್ಲಿ ಎಲ್ಲೂ ಸಿಕ್ಕಿಲ್ಲ. ಇನ್ನು ವಿಜಯೇಂದ್ರ ಆರ್​ಟಿಜಿಎಸ್ ಗಿರಾಕಿ ಎಂದು ವ್ಯಂಗ್ಯವಾಡಿದರು.

ಎಸ್​ಟಿ ಹೋರಾಟದ ಬಗ್ಗೆ ನನಗೆ ಪಾಠ ಮಾಡಲು ಈಶ್ವರಪ್ಪ ಬರ್ತಾರೆ. ಎಸ್​ಟಿ ಮೀಸಲಾತಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಅಹಿಂದ ಸಿದ್ದರಾಮಯ್ಯ ಪರ ಇದೆ ಅಂತ ಸಿದ್ದರಾಮಯ್ಯನನ್ನ ಮುಗಿಸಲು ಮೀಸಲಾತಿ ಹೆಸರಲ್ಲಿ ಈಶ್ವರಪ್ಪ ಅವರನ್ನು ಮುಂದೆ ಬಿಟ್ಟಿದೆ. ನಾನು ಎಸ್​ಟಿ ಮೀಸಲಾತಿ ವಿರೋಧಿಯಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಈಶ್ವರಪ್ಪ ಧಮ್ ಇದ್ರೆ, ಮುಂದಿನ ಮುಖ್ಯಮಂತ್ರಿ ಅಂತ ಹೇಳಲಿ ನೋಡೋಣ. ನಾಟಕ ಆಡ್ತೀರೇನ್ರೀ.. ಮೀಸಲಾತಿಗೆ ಕಾಂಗ್ರೆಸ್ ವಿರೋಧವಿಲ್ಲ ಎಂದರು.

ABOUT THE AUTHOR

...view details