ದಾವಣಗೆರೆ:ಗ್ರಾ.ಪಂ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, 18 ವರ್ಷ ಪೂರ್ಣಗೊಳಿಸಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲಿರುವ ಹೊಸ ಮತದಾರರಿಗೆ ಎಪಿಕ್ ಕಾರ್ಡ್‌ಗಳನ್ನು ಉಚಿತವಾಗಿ ನೀಡಲು ದಾವಣಗೆರೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಬಣ್ಣದ ಹೊಸ ಮಾದರಿಯ ಪಿವಿಸಿ ಎಪಿಕ್ ಕಾರ್ಡ್‌ಗಳನ್ನು ಈಗಾಗಲೇ ಜಾರಿಗೆ ತರಲಾಗಿದ್ದು, ವ್ಯಕ್ತಿಗತ ಮಾಹಿತಿಗಳನ್ನು ಟ್ಯಾಂಪರ್ ಮಾಡದಂತೆ ಈ ಕಾರ್ಡ್ 10 ಸೆಕ್ಯೂರಿಟಿ ಫೀಚರ್ಸ್ಸ್ ಗಳನ್ನು ಹೊಂದಿದೆಯಂತೆ. ಇದನ್ನು ಹೊರತು ಪಡಿಸಿದರೆ ದೃಷ್ಟಿಹೀನರಿಗೆಂದೇ ಜಿಲ್ಲಾಡಳಿತ ವಿಶೇಷ ಬಗೆಯ ಬ್ರೈಲಿ ಎಪಿಕ್ ಕಾರ್ಡ್‌ಗಳನ್ನು ಕೂಡ ಜಾರಿಗೆ ತಂದಿದ್ದು, ಅಧಿಕೃತವಾಗಿ ಈ ಕಾರ್ಡ್ ಗಳನ್ನು ಜನವರಿ 25ರ ರಾಷ್ಟ್ರೀಯ ಮತದಾರರ ದಿನದಂದು ಜಿಲ್ಲಾಡಳಿತ ಬಿಡುಗಡೆ ಮಾಡಲಿದೆ. ಪ್ರಯೋಗಿಕವಾಗಿ ಈಗಾಗಲೇ ದಾವಣಗೆರೆ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರದರ್ಶಿಸಲಾಯಿತು.
ವೋಟರ್ ಐಡಿ ಕಾರ್ಡ್‌ಗಳ ಜಾಗದಲ್ಲಿ ಪಿವಿಸಿ ಎಪಿಕ್ ಕಾರ್ಡ್‌ಗಳು ಜಾರಿಗೆ
ಆಧುನಿಕತೆ ಹಾಗೂ ತಂತ್ರಜ್ಞಾನ ಬೆಳೆದಂತೆ ಅದನ್ನು ಪ್ರತಿಯೊಂದರಲ್ಲಿ ಅಳವಡಿಸುವ ಪ್ರಯತ್ನ ನಡೆಯುತ್ತದೆ. ಅದೇ ಮಾದರಿಯಲ್ಲಿ ಇದೀಗ ಹಳೆಯ ಲ್ಯಾಮಿನೇಟೆಡ್ ಎಪಿಕ್ ಕಾರ್ಡ್ ಆಂದ್ರೆ ವೋಟರ್ ಐಡಿ ಕಾರ್ಡ್‌ಗಳ ಜಾಗದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿ ಪಿವಿಸಿ ಎಪಿಕ್ ಕಾರ್ಡ್‌ಗಳು ಜಾರಿಗೆ ತರಲಾಗಿದೆ. ಈ ಕಾರ್ಡ್‌ಗಳನ್ನು ಮೊದಲ ಬಾರಿಗೆ ಹೊಸದಾಗಿ ಮತದಾರರ ಪಟ್ಟಿಗೆಗೆ ಸೇರಿದ ನೂತನ ಮತದಾರರಿಗೆ ಮೊದಲು ಈ ಕಾರ್ಡ್ ನೀಡಲಾಗುತ್ತದೆ. ಈಗಾಗಲೇ ಐಡಿ ಕಾರ್ಡ್ ಹೊಂದಿರುವ 40 ವರ್ಷ ಮೇಲ್ಪಟ್ಟ ಮತದಾರರು 30 ರೂಪಾಯಿ ನೀಡಿ ಈ ಕಾರ್ಡ್ ಪಡೆದುಕೊಳ್ಳಬಹುದಾಗಿದೆ.