ಕರ್ನಾಟಕ

karnataka

ETV Bharat / state

ಭೂ ಸುಧಾರಣಾ ಕಾಯ್ದೆ ಸುಗ್ರೀವಾಜ್ಞೆ ಹಿಂಪಡೆಯುವಂತೆ ರೈತ ಸಂಘ ಆಗ್ರಹ

ಈಗಾಗಲೇ ಇಡೀ ಜಗತ್ತು ಕೋವಿಡ್ ನಿಂದಾಗಿ ಸಂಕಷ್ಟ ಎದುರಿಸುತ್ತಿದೆ. ಜನತೆ ಅಸಹಾಯಕರಾಗಿರುವ ಸಮಯ ನೋಡಿಕೊಂಡು ತರಾತುರಿಯಲ್ಲಿ ಭೂ ಸುಧಾರಣಾ ಕಾಯ್ದೆ ಸುಗ್ರೀವಾಜ್ಞೆ ಜಾರಿಗೆ ತಂದಿರುವುದನ್ನು ಖಂಡಿಸುತ್ತೇವೆ..

ಮನವಿ
ಮನವಿ

By

Published : Sep 21, 2020, 7:04 PM IST

ಹರಿಹರ: ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ಕಾಯ್ದೆಯಲ್ಲಿ ಬದಲಾವಣೆ ತರುತ್ತಿರುವ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಶಾಸಕ ಎಸ್ ರಾಮಪ್ಪ ಅವರಿಗೆ ಮನವಿ ನೀಡಿದರು.

ನಂತರ ಸಂಘದ ಜಿಲ್ಲಾಧ್ಯಕ್ಷ ಜಿ.ಪ್ರಭುಗೌಡ ಕೆಎನ್‌ಹಳ್ಳಿ ಮಾತನಾಡಿ, ಹೋರಾಟ, ತ್ಯಾಗ, ಬಲಿದಾನದ ಪರಿಣಾಮ ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಯಾಗಿದೆ. ರೈತರು, ಬಡವರು, ಕಾರ್ಮಿಕರು ಹಾಗೂ ರಾಜ್ಯದ ಏಳಿಗೆಯಲ್ಲಿ ಈ ಕಾಯ್ದೆ ಪ್ರಮುಖ ಪಾತ್ರ ವಹಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಈಗಾಗಲೇ ಇಡೀ ಜಗತ್ತು ಕೋವಿಡ್‌ನಿಂದಾಗಿ ಸಂಕಷ್ಟ ಎದುರಿಸುತ್ತಿದೆ. ಜನತೆ ಅಸಹಾಯಕರಾಗಿರುವ ಸಮಯ ನೋಡಿ ತರಾತುರಿಯಲ್ಲಿ ಸುಗ್ರೀವಾಜ್ಞೆ ತಂದಿರುವುದನ್ನು ಖಂಡಿಸುತ್ತೇವೆ ಎಂದರು.

ಈ ಸುಗ್ರೀವಾಜ್ಞೆ ಆದೇಶ ಹಿಂಪಡೆಯುವವರೆಗೆ ವಿಧಾನಸಭೆ ಅಧಿವೇಶನದಲ್ಲಿ ವಿಪಕ್ಷದ ಶಾಸಕರು ಹೋರಾಟ ಮಾಡಬೇಕು. ರೈತರ ಹಾಗೂ ನಾಡಿನ ಜನತೆಯ ಹಿತ ಕಾಪಾಡಬೇಕೆಂದು ಎಸ್.ರಾಮಪ್ಪರಲ್ಲಿ ಮನವಿ ಮಾಡಿಕೊಂಡರು. ಮನವಿ ಸ್ವೀಕರಿಸಿದ ಶಾಸಕ ಎಸ್.ರಾಮಪ್ಪ, ಸುಗ್ರೀವಾಜ್ಞೆ ಜಾರಿ ಮಾಡುವ ಸಾಂವಿಧಾನಿಕ ಸೌಲಭ್ಯವನ್ನು ರಾಜ್ಯ ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ಕಾಂಗ್ರೆಸ್ ಪಕ್ಷ ಇದನ್ನು ಉಗ್ರವಾಗಿ ಖಂಡಿಸುತ್ತದೆ. ಇದು ರೈತ ವಿರೋಧಿಯಾಗಿದ್ದು, ಈ ವಿಷಯವನ್ನು ವಿಧಾನಸಭೆಯಲ್ಲಿ ಕಾಂಗ್ರೆಸ್ ಪ್ರಸ್ತಾಪಿಸಲಿದೆ ಎಂದರು.

ಈ ವೇಳೆ ಸಂಘದ ಪದಾಧಿಕಾರಿಗಳಾದ ದೊಗ್ಗಳ್ಳಿ ಮಹೇಶ್ವರಪ್ಪ, ಶಂಭುಲಿಂಗಪ್ಪ, ಉಮೇಶ್ ಕುಣಿಬೆಳೆಕೆರೆ, ಮಾರುತಿ ರಾವ್ ಪಾಮೇನಹಳ್ಳಿ, ಬಸಣ್ಣ ಗುತ್ತೂರು, ಕುಂಬಳೂರು ಅಂಜಿನಪ್ಪ, ನಾಗೇನಹಳ್ಳಿ ವೀರಭದ್ರಪ್ಪ, ಎಂ.ಬಸಪ್ಪಿ ಇತರರಿದ್ದರು.

ABOUT THE AUTHOR

...view details