ಹರಿಹರ:ಬೆಂಕಿಯಿಂದ ಮನೆ ಹಾನಿಗೀಡಾಗಿದ್ದ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧನ ಸಹಾಯ ಮಾಡಲಾಯಿತು.
ಬೆಂಕಿ ಅವಘಡಕ್ಕೀಡಾಗಿದ್ದ ಕುಟುಂಬಕ್ಕೆ ಧನ ಸಹಾಯ
ಬೆಂಕಿಯಿಂದ ಮನೆ ಹಾನಿಗೀಡಾಗಿಡಾಗಿದ್ದ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧನ ಸಹಾಯ ಮಾಡಲಾಯಿತು.
ಕಡರನಾಯಕನಹಳ್ಳಿ ವಲಯದ ಇಂಗಳಗುಂದಿ ಕಾರ್ಯಕ್ಷೇತ್ರದ ಶ್ರೀ ಗಗನ ಪಿಬಿಜಿ ಸಂಘದ ಸದಸ್ಯರಾದ ರೇಣುಕಮ್ಮ ಕೋಂ ರಾಮಪ್ಪ ಅವರ ಮನೆ ಬೆಂಕಿಯಿಂದ ಹಾನಿಗೀಡಾಗಿತ್ತು. ಈ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಜಯಂತ್ ಪೂಜಾರಿಯವರು ಸಂತ್ರಸ್ತರಿಗಾಗಿ ಧರ್ಮಸ್ಥಳದಿಂದ ಮಂಜೂರಾಗಿದ್ದ 10,000 ರೂಪಾಯಿಗಳ ಚೆಕ್ಕನ್ನು ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ವೇಳೆ ತಾಲೂಕು ಯೋಜನಾಧಿಕಾರಿಯಾದ ಗಣಪತಿ ಮಾಳಂಜಿ, ಗ್ರಾಮ ಪಂಚಾಂಯಿತಿ ಅಧ್ಯಕ್ಷರಾದ ಸಾಕಮ್ಮ, ಒಕ್ಕೂಟ ಅಧ್ಯಕ್ಷರಾದ ಸುವರ್ಣಮ್ಮ, ಮೇಲ್ವಿಚಾರಕರಾದ ಪ್ರವೀಣ್ ಹಾಗೂ ಸೇವಾಪ್ರತಿನಿಧಿ ಸಾವಿತ್ರಿ ಉಪಸ್ಥಿತರಿದ್ದರು.