ದಾವಣಗೆರೆ :ನಗರದ ಎಸ್.ಎಸ್.ಬಡಾವಣೆಯಲ್ಲಿರುವ ನಾಗರಿಕರ ಸಮಿತಿ ಸಂಘದ ಅಧ್ಯಕ್ಷರಾದ ಡಾ.ಶಾಂತಾ ಭಟ್ ನಡೆಸುತ್ತಿರುವ ಹಸಿ ಕಸದಿಂದ ಎರೆಹುಳು ಗೊಬ್ಬರ ತಯಾರಿಕಾ ಘಟಕಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿದರು.
ದಾವಣಗೆರೆ ಎರೆಹುಳು ಗೊಬ್ಬರ ತಯಾರಿಕಾ ಘಟಕಕ್ಕೆ ಜಿಲ್ಲಾಧಿಕಾರಿ ಭೇಟಿ
ದಾವಣಗೆರೆಯಲ್ಲಿ ಡಾ.ಶಾಂತಾ ಭಟ್ ಎಂಬವರು ನಡೆಸುತ್ತಿರುವ ಹಸಿ ಕಸದಿಂದ ಎರೆಹುಳು ಗೊಬ್ಬರ ತಯಾರಿಕೆ ಘಟಕಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿದರು.
ಜಿಲ್ಲಾಧಿಕಾರಿ ಭೇಟಿ
ಹಸಿಕಸದಿಂದ ಎರೆಹುಳು ಗೊಬ್ಬರ ವಿಧಾನ ಹೇಗೆ?
ಬಡಾವಣೆಯಲ್ಲಿರುವ ಮನೆ-ಮನೆಗಳಿಂದ ಹಸಿಕಸ, ಬೀದಿಯಲ್ಲಿರುವ ಮರಗಳಿಂದ ಉದುರಿದ ಒಣ ಎಲೆಗಳು ಹಾಗೂ ಸ್ವಲ್ಪ ಸಗಣಿ ಮತ್ತು ಕಾಂಪೋಸ್ಟ್ ಬಳಸಿ ಅವೆಲ್ಲವನ್ನು ಫೈಬರ್ ಡ್ರಮ್ಮಿನಲ್ಲಿ ಹಾಕಲಾಗುತ್ತೆ. ಈ ಡ್ರಮ್ಮು ತುಂಬಿದ ನಂತರ ಒಂದು ತಿಂಗಳ ಅವಧಿ ಹಾಗೆಯೇ ಬಿಟ್ಟು ನಂತರ ಆ ತ್ಯಾಜದಲ್ಲಿ ಎರೆಹುಳುಗಳನ್ನು ಬಿಡಲಾಗುತ್ತೆ. ಹೀಗೆ ಪ್ರಾರಂಭದ ಹಂತದಿಂದ ಮೂರು ತಿಂಗಳುಗಳ ನಂತರ ಉತ್ಕೃಷ್ಟವಾದ ಸಾವಯವ ರಸಗೊಬ್ಬರ ಬಳಕೆಗೆ ಲಭ್ಯವಿರುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಶಾಂತಾ ಭಟ್ ಮಾಹಿತಿ ನೀಡಿದರು.