ಕರ್ನಾಟಕ

karnataka

ETV Bharat / state

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ: ಕಾಂಗ್ರೆಸ್​ಗೆ ಬಂಡಾಯದ ಬಿಸಿ

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಆದ್ರೆ, ಟಿಕೆಟ್ ಹಂಚಿಕೆ ಬಳಿಕ ಅಸಮಾಧಾನದ ಹೊಗೆಯಾಡುತ್ತಿದೆ.

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ: ಕಾಂಗ್ರೆಸ್​ಗೆ ಬಂಡಾಯದ ಬಿಸಿ

By

Published : Nov 4, 2019, 12:31 PM IST

ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಆದ್ರೆ, ಟಿಕೆಟ್ ಹಂಚಿಕೆ ಬಳಿಕ ಅಸಮಾಧಾನದ ಹೊಗೆಯಾಡುತ್ತಿದೆ. ನಾಮಪತ್ರ ಸಲ್ಲಿಕೆ ಕೊನೆಯಾದರೂ ಅಭ್ಯರ್ಥಿಗಳು ಬಿ ಫಾರಂಗಾಗಿ ಕಾಯುತ್ತಿದ್ದಾರೆ. ಸ್ಥಳೀಯ ಅಭ್ಯರ್ಥಿಗಳಿಗೆ ಮಣೆ ಹಾಕಬೇಕು. ಈಗಾಗಲೇ ನಾಮಪತ್ರ ಸಲ್ಲಿಸಿದವರಿಂದ ವಾಪಾಸ್ ಪಡೆಯಬೇಕೆಂದು ಕೆಲ ವಾರ್ಡ್‍ಗಳಲ್ಲಿ ಸ್ಥಳೀಯರು ಆಗ್ರಹಿಸಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ: ಕಾಂಗ್ರೆಸ್​ಗೆ ಬಂಡಾಯದ ಬಿಸಿ

ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆಯಾಗಿದ್ದು, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ, ಪಕ್ಷೇತರರು ಸೇರಿ ಒಟ್ಟು 372 ನಾಮಪತ್ರ ಸಲ್ಲಿಸಿಕೆಯಾಗಿವೆ. ನೇರವಾಗಿ 3 ಪಕ್ಷಗಳ ನಡುವೆ ಪೈಪೋಟಿ ನಡೆಯುತ್ತಿದೆ. ಈ ನಡುವೆ ಕೆಲ ಅಭ್ಯರ್ಥಿಗಳು ಬಿ ಫಾರಂ ಸಿಗದ ಕಾರಣ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಬಿ ಫಾರಂ ಸಿಗದ ಅಭ್ಯರ್ಥಿಗಳು ಇದೀಗ ಪಕ್ಷದ ವರಿಷ್ಠರ ಬಳಿ ತಮ್ಮ ಅಳಲು ತೊಡಿಕೊಂಡಿದ್ದಾರೆ. ಸ್ಥಳೀಯರಿಗೆ ಟಿಕೆಟ್ ನೀಡದೆ ಬೇರೆ ವ್ಯಕ್ತಿಗಳಿಗೆ ಟಿಕೆಟ್ ನೀಡಲಾಗಿದೆ. ಸ್ಥಳೀಯರು ಇದಕ್ಕೆ ತೀವ್ರ ವಿರೋಧ ಮಾಡುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಪಕ್ಷದ ನಿಷ್ಠೆಯಾಗಿ ಕೆಲಸ ಮಾಡಿದ್ದೇವೆ. ಇದೀಗ ನಮಗೆ ಬೆಂಬಲ ನೀಡಬೇಕೆಂದು ಕಾಂಗ್ರೆಸ್ ಮುಖಂಡ ದುಗ್ಗೇಶ್ ಒತ್ತಾಯಿಸಿದ್ದಾರೆ.

ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ. ಅಂದು ಕಾಂಗ್ರೆಸ್​ನಿಂದ ಟಿಕೆಟ್ ನೀಡಿ ಸ್ಪರ್ಧೆ ಮಾಡಿರುವ ವ್ಯಕ್ತಿಯ ನಾಮಪತ್ರ ವಾಪಸ್ ಪಡೆಯಬೇಯಬೇಕೆಂದು 19ನೇ ವಾರ್ಡ್‍ನ ಅಭ್ಯರ್ಥಿ ದುಗ್ಗೇಶ್ ಒತ್ತಾಯಿಸಿದ್ದಾರೆ. ಕಾಂಗ್ರೆಸ್​​ನಿಂದ ನನಗೆ ಟಿಕೆಟ್ ಸಿಕ್ಕಿಲ್ಲ. ಆದ್ರೂ ಪಕ್ಷ ನನಗೆ ಬೆಂಬಲಿಸುತ್ತದೆ ಎಂದು ಸ್ಪರ್ಧೆ ಮಾಡಿರುವೆ ಎಂದು ದುಗ್ಗೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದುಗ್ಗೇಶ್ ತಮಿಳು ಆದಿ ಕರ್ನಾಟಕದ ಮುಖಂಡ. ನಾವು ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದ್ದೇವೆ. ನಮ್ಮ ಸಮುದಾಯಕ್ಕೆ ಯಾವತ್ತೂ ಟಿಕೆಟ್ ಸಿಕ್ಕಿಲ್ಲ. ಈ ಬಾರಿ ಕಾಂಗ್ರೆಸ್ 19ನೇ ವಾರ್ಡ್‍ಗೆ ದುಗ್ಗೇಶ್‍ಗೆ ಟಿಕೆಟ್ ನೀಡಿಲ್ಲ. ಇದೀಗ ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ದುಗ್ಗೇಶ್ ಅವರನ್ನೇ ಕಾಂಗ್ರೆಸ್ ಬೆಂಬಲಿಸಬೇಕೆಂಬುದು ತಮಿಳು ಸಮಾಜದ ಮುಖಂಡರ ಆಗ್ರಹವಾಗಿದೆ.

ABOUT THE AUTHOR

...view details