ದಾವಣಗೆರೆ:ಟಗರು ಕಾಳಗ ನೋಡುವುದೇ ಒಂದು ಕ್ರೇಜ್, ಯುವಕರು ವಯಸ್ಕರು ಎನ್ನದೇ ಎಲ್ಲರೂ ಟಗರು ಕಾಳಗವನ್ನು ಕಣ್ತುಂಬಿಕೊಳ್ಳುವುದೇ ವಿಶೇಷವಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತ್ಯಾವಣಗಿ ಗ್ರಾಮದಲ್ಲಿ ನಡೆದ ಕಟಗರು ಕಾಳಗದಲ್ಲಿ ಕೊಬ್ಬು ತುಂಬಿದ ಕುರಿಗಳು ಗೆಲ್ಲಲು ಸೆಣಸಾಟ ನಡೆಸಿದವು.
ಕನ್ನಡ ರಾಜ್ಯೋತ್ಸವ ನಿಮಿತ್ತ ಸ್ಥಳೀಯ ಗೆಳೆಯರ ಬಳಗದಿಂದ ರಾಜ್ಯಮಟ್ಟದ ಗ್ರಾಮೀಣ ಕ್ರೀಡೆ ಆಯೋಜಿಸಲಾಗಿತ್ತು. ಟಗರು ಕಾಳಗದ ಸೆಣಸಾಟಕ್ಕೆ ಇಡೀ ಜನ ಫಿದಾ ಆದರು. ದಾವಣಗೆರೆ, ಬಾಗಲಕೋಟೆ, ಹಾವೇರಿ, ಗದಗ, ಶಿವಮೊಗ್ಗ, ಸೇರಿದಂತೆ ಚಿತ್ರದುರ್ಗದಿಂದ ಆಗಮಿಸಿದ್ದ ಟಗರುಗಳು ಕಾದಾಟದಲ್ಲಿ ಪಾಲ್ಗೊಂಡಿದವು. ಹಾಲು ಹಲ್ಲು, ಎರಡು, ಮೂರು, ಹಾಗು ನಾಲ್ಕು ಹಲ್ಲು ಸೇರಿದ್ದಂತೆ ಆರು ಹಲ್ಲು ಎಂಟು ಹಲ್ಲಿನ ಟಗರುಗಳು ಕಾಳಗದಲ್ಲಿ ತಲೆಗೆ ತಲೆಕೊಟ್ಟು ಅದ್ಭುತ ಪ್ರದರ್ಶನ ನೀಡಿದವು.
ಟಗರು ಕಾಳಗಕ್ಕೆ ದಾವಣಗೆರೆ ಹಾಟ್ ಸ್ಪಾಟ್:ಇಲ್ಲಿ ನಡೆಯುವ ಟಗರು ಕಾಳಗ ಇಡೀ ರಾಜ್ಯದಲ್ಲಿ ಹೆಸರುವಾಸಿ. ಆದರೆ, ಟಗರುಗಳ ಸಾಕಣೆ ಪ್ರಮಾಣ ಕಡಿಮೆ ಆಗಿದ್ದರಿಂದ ಗ್ರಾಮೀಣ ಸ್ಪರ್ಧೆ ಟಗರು ಕಾಳಗ ಕಮ್ಮಿ ಆಗಿಲ್ಲ, ದಾವಣಗೆರೆಯಲ್ಲಿ ಮಾತ್ರ ಸಾಕಷ್ಟು ಜನ ಟಗರುಗಳನ್ನು ಸಾಕುವ ಮೂಲಕ ಅದಕ್ಕೆ ಟ್ರೈನಿಂಗ್ ನೀಡಿ ಕಣಕ್ಕೆ ಇಳಿಸುತ್ತಾರೆ.
ಹೀಗೆ ಸೆಣಸಾಟ ನಡೆಸುವ ಟಗರುಗಳು ಮೈದಾನದಲ್ಲಿ ಪರಸ್ಪರ ಗೆಲುವಿಗೆ ಹೋರಾಡುತ್ತವೆ. ಇದಲ್ಲದೇ ಕಾಳಗದಲ್ಲಿ ಮಾಲೀಕನ ಆಜ್ಞೆಯಂತೆ ಟಗರು ಎದುರಾಳಿ ಟಗರಿನ ವಿರುದ್ಧ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದವು.