ಕರ್ನಾಟಕ

karnataka

ETV Bharat / state

ಡಿಸೆಂಬರ್ 5ರಂದು ದಾವಣಗೆರೆ ಸಂಪೂರ್ಣ ಬಂದ್.. ಕನ್ನಡ ಪರ ಸಂಘಟನೆಗಳ ಒಕ್ಕೂಟ ಘೋಷಣೆ..

ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಕನ್ನಡ ಪರ ಹೋರಾಟಗಾರರು ತೀವ್ರ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಡಿಸೆಂಬರ್ 05 ರ ಕರ್ನಾಟಕ ಬಂದ್​​ಗೆ ದಾವಣಗೆರೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ..

Davanagere Band on December 05
ಡಿಸೆಂಬರ್ 05 ರಂದು ದಾವಣಗೆರೆ ಬಂದ್

By

Published : Dec 1, 2020, 4:53 PM IST

ದಾವಣಗೆರೆ : ಮರಾಠ ಅಭಿವೃದ್ಧಿ ನಿಗಮವನ್ನು ರದ್ದುಗೊಳಿಸಬೇಕೆಂದು ಡಿಸೆಂಬರ್ 5ಕ್ಕೆ ಕರೆದಿರುವ ಕರ್ನಾಟಕ ಬಂದ್​​​​​ಗೆ, ದಾವಣಗೆರೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಡಿ. 5ರಂದು ಇಡೀ ದಾವಣಗೆರೆಯನ್ನು ಬಂದ್ ಮಾಡುವುದಾಗಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಘೋಷಣೆ ಮಾಡಿದೆ.

ಈ ಕುರಿತು ಮಾತನಾಡಿದ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಟಿ. ಶಿವಕುಮಾರ್, ತಕ್ಷಣ ಮರಾಠ ಅಭಿವೃದ್ಧಿ ನಿಗಮವನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿದರು.

ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಘೋಷಣೆ

ಸರ್ಕಾರವು ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲಿ. ಮಡಿಕೇರಿಯ‌ ಪ್ರವಾಹದಲ್ಲಿ ಮನೆ‌ ಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಡಲಿ. ಜನರ ಸಮಸ್ಯೆಯನ್ನು ಬಗೆಹರಿಸಲಿ, ಅದೆಲ್ಲವನ್ನು ಬಿಟ್ಟು ನಿಗಮ ಮಂಡಳಿಗಳ ರಚನೆ ಮಾಡುತ್ತಿರುವುದು ಎಷ್ಟು ಸರಿ ಎಂದು ಆಕ್ರೋಶ ಹೊರ ಹಾಕಿದರು.

ABOUT THE AUTHOR

...view details