ಕರ್ನಾಟಕ

karnataka

ETV Bharat / state

ದಾವಣಗೆರೆ ಕೈ ಅಭ್ಯರ್ಥಿ ಮಂಜಪ್ಪಗೆ ಸಿಪಿಐ ಪಕ್ಷದ ಬೆಂಬಲ - ಹೆಚ್. ಬಿ. ಮಂಜಪ್ಪ

ದಾವಣಗೆರೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ವಾತಾವರಣವಿದೆ. ಶ್ರಮಿಕರು, ಕೂಲಿ ಕಾರ್ಮಿಕರು, ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ. ಸುಳ್ಳು ಹೇಳಿಕೊಂಡು ಓಡಾಡುತ್ತಿರುವ ಬಿಜೆಪಿ ಅಭ್ಯರ್ಥಿ ಜಿ.ಎಂ.‌ಸಿದ್ದೇಶ್ವರ್ ಸೋಲುವುದು ಖಚಿತ ಎಂದು ಸಿಪಿಐ ಮುಖಂಡ ಹೆಚ್.ಬಿ. ರಾಮಚಂದ್ರಪ್ಪ ಹೇಳಿದರು.

ಮಂಜಪ್ಪ

By

Published : Apr 19, 2019, 3:11 PM IST


ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪರಿಗೆ ಬೆಂಬಲ ನೀಡಿರುವ ಸಿಪಿಐ ಪಕ್ಷ, ಈಗಾಗಲೇ ಮತದಾರರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದೆ ಎಂದು ಸಿಪಿಐ ಮುಖಂಡ ಹೆಚ್.ಬಿ.ರಾಮಚಂದ್ರಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ವಾತಾವರಣವಿದೆ. ಶ್ರಮಿಕರು, ಕೂಲಿ ಕಾರ್ಮಿಕರು, ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ. ಸುಳ್ಳು ಹೇಳಿಕೊಂಡು ಓಡಾಡುತ್ತಿರುವ ಬಿಜೆಪಿ ಅಭ್ಯರ್ಥಿ ಜಿ.ಎಂ.‌ಸಿದ್ದೇಶ್ವರ್ ಸೋಲುವುದು ಖಚಿತ ಎಂದು ಹೇಳಿದರು.

ದಾವಣಗೆರೆ ಕೈ ಅಭ್ಯರ್ಥಿ ಹೆಚ್.ಬಿ.ಮಂಜಪ್ಪಗೆ ಸಿಪಿಐ ಪಕ್ಷ ಬೆಂಬಲ

ಪ್ರಧಾನಿ ನರೇಂದ್ರ ಮೋದಿ ಕೋಟಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಮಹಾದಾಯಿ ನದಿ ನೀರಿನ ವಿವಾದ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ರೈತರ ಹಿತ ಕಾಪಾಡುವತ್ತ ಮೋದಿ ಗಮನ ಹರಿಸಿಲ್ಲ. ರೈತರ ಸಾಲಮನ್ನಾ ಮಾಡಿಲ್ಲ. ಉದ್ಯೋಗ ಸೃಷ್ಟಿ ಮಾಡಿಲ್ಲ. ಕೇವಲ ಸುಳ್ಳು ಹೇಳುತ್ತಾ ಪ್ರಚಾರ ನಡೆಸುತ್ತಿರುವ ಮೋದಿ ಸೋಲಿಸಬೇಕು. ಹಾಗೆಯೇ ಕಳೆದ 25 ವರ್ಷಗಳಿಂದ ಜಿ.ಎಂ. ಸಿದ್ದೇಶ್ವರ್ ಆಗಲೀ, ಅವರ ತಂದೆ ಮಲ್ಲಿಕಾರ್ಜುನಪ್ಪರಾಗಲೀ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ.‌ ಹಾಗಾಗಿ ಸಿದ್ದೇಶ್ವರ್​ರನ್ನ ಮತದಾರರು ಯಾವುದೇ ಕಾರಣಕ್ಕೂ ಗೆಲ್ಲಿಸಬಾರದು ಎಂದು ಮನವಿ ಮಾಡಿದರು.

ABOUT THE AUTHOR

...view details