ದಾವಣಗೆರೆ:ಜಿಲ್ಲೆಯಲ್ಲಿ ನಿನ್ನೆ ತಾಂತ್ರಿಕ ದೋಷದಿಂದ 323 ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ. ಆದರೆ ವಾಸ್ತವವಾಗಿ ಪಾಸಿಟಿವ್ ಬಂದಿರುವುದು ಇನ್ನೂರು ಪ್ರಕರಣಗಳು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಸ್ಪಷ್ಟನೆ ನೀಡಿದ್ದಾರೆ.
ದಾವಣಗೆರೆಯಲ್ಲಿ ನಿನ್ನೆ ಪತ್ತೆಯಾಗಿದ್ದು 200 ಕೊರೊನಾ ಕೇಸ್, 323 ಅಲ್ಲ! - ದಾವಣಗೆರೆ
ದಾವಣಗೆರೆ ಜಿಲ್ಲೆಯಲ್ಲಿ ನಿನ್ನೆ ತಾಂತ್ರಿಕ ದೋಷದಿಂದಾಗಿ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಲ್ಲಿ ತಪ್ಪಾಗಿದೆ.
ಈ ಸಂಬಂಧ ಮೀಡಿಯಾ ಬುಲೆಟಿನ್ ಗ್ರೂಪ್‌ನಲ್ಲಿ ಸ್ಪಷ್ಟನೆ ನೀಡಿರುವ ಅವರು, ಐಸಿಎಂಆರ್ ಪೋರ್ಟಲ್‌ನಲ್ಲಿ 200 ಪ್ರಕರಣಗಳು ಮಾತ್ರ ಅಪ್‌ಲೋಡ್ ಆಗಬೇಕಿತ್ತು. ಆದ್ರೆ ಜಿಲ್ಲೆಯಿಂದ ಪಾಸಿಟಿವ್ ಕೇಸ್ಗಳನ್ನು ಅಪ್‌ಲೋಡ್ ಮಾಡಬೇಕಾದ 'ಪರಿಹಾರ' ಪೋರ್ಟಲ್‌ನಲ್ಲಿ ನಮೂದು ಮಾಡುವಾಗ ಬುಧವಾರದ 123 ಪ್ರಕರಣಗಳು ಉಳಿದುಕೊಂಡಿದ್ದವು. ಡಿಲೀಟ್ ಮಾಡಲು ಪ್ತಯತ್ನಿಸಿದರೂ 123 ಪ್ರಕರಣಗಳು ಹಾಗೆಯೇ ಉಳಿದುಕೊಂಡಿವೆ ಎಂದು ಸಮಜಾಯಿಷಿ ನೀಡಿದ್ದಾರೆ.
ಡಬಲ್ ಎಂಟ್ರಿ ಡಿಲೀಟ್ ಮಾಡಲು ಯತ್ನಿಸಲಾಯಿತಾದರೂ ಆಗಲಿಲ್ಲ. ಈ ತಾಂತ್ರಿಕ ದೋಷದಿಂದ ಹೆಚ್ಚುವರಿ ಪ್ರಕರಣಗಳು ರಾಜ್ಯ ಹಾಗೂ ಜಿಲ್ಲಾ ಹೆಲ್ತ್ ಬುಲೆಟಿನ್ನಲ್ಲಿ ಕಾಣಿಸಿವೆ ಎಂದು ಮಾಹಿತಿ ನೀಡಿದ್ದಾರೆ.