ಕರ್ನಾಟಕ

karnataka

ETV Bharat / state

ಮಸೀದಿ ಮೇಲೆ ಪೊಲೀಸರ ದಾಳಿ.. ಹತ್ತಕ್ಕೂ ಹೆಚ್ಚು ಮಂದಿ ವಶ, ಬಿಡುಗಡೆ.. - davanagere latest news

ಸೆಕ್ಷನ್‌ 144 ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿ, ಮಸೀದಿ ಆಡಳಿತ ಮಂಡಳಿಗೆ ನೋಟಿಸ್​ ಜಾರಿ ಮಾಡಲಾಯಿತು.

ಮಸೀದಿ ಮೇಲೆ ಪೊಲೀಸರ ದಾಳಿ
ಮಸೀದಿ ಮೇಲೆ ಪೊಲೀಸರ ದಾಳಿ

By

Published : Apr 1, 2020, 9:24 AM IST

ದಾವಣಗೆರೆ: ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಹತ್ತಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ಮೂಡಿಸಿದ್ದಾರೆ. ಹರಿಹರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಮುಖ್ಯ ಮಸೀದಿಯಲ್ಲಿ ಈ ಘಟನೆ ಜರುಗಿದೆ.

ನಿಷೇಧಾಜ್ಞೆ ಉಲ್ಲಂಘಿಸಿ ಪ್ರಾರ್ಥನೆ ಮಾಡಲಾಗುತಿತ್ತು. ಖಚಿತ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕೆ ಧಾವಿಸಿ ತರಾಟೆಗೆ ತೆಗೆದುಕೊಂಡರು. ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದವರ ಮೇಲೆ ತಹಶೀಲ್ದಾರ್ ರಾಮಚಂದ್ರಪ್ಪ, ಸಿಪಿಐ ಶಿವಪ್ರಸಾದ ಗರಂ ಆದರಲ್ಲದೇ, ಕರೋನಾ ಭೀತಿ ಲೆಕ್ಕಿಸದೇ ಸಾಮೂಹಿಕ ಪ್ರಾರ್ಥನೆಗೆ ಸೇರಿದ್ದ ಎಲ್ಲರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದರು.

ಸೆಕ್ಷನ್‌ 144 ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿ, ಮಸೀದಿ ಆಡಳಿತ ಮಂಡಳಿಗೆ ನೋಟಿಸ್​ ಜಾರಿ ಮಾಡಲಾಯಿತು. ಬಳಿಕ ವೈಯಕ್ತಿಕ ಬಾಂಡ್ ಮೇಲೆ ವಶಪಡಿಸಿಕೊಂಡವರನ್ನೂ ಬಿಡುಗಡೆ ಮಾಡಲಾಯಿತು.

ABOUT THE AUTHOR

...view details