ದಾವಣಗೆರೆ: ಸೋತವರಿಗೆ, ಹೊರಗಿನಿಂದ ಬಂದವರಿಗೆ ಸಚಿವ ಸ್ಥಾನ ನೀಡುತ್ತೀರಿ, ಆದರೆ ನಿಮ್ಮ ಬೆಂಬಲಿಗರಾಗಿ ಏಳು ಹಾಗೂ ಮೂರು ಬಾರಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ನೀಡುತ್ತಿಲ್ಲ, ಈ ಕೂಡಲೇ ಛಲವಾದಿ ಜನಾಂಗಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ದಾವಣಗೆರೆಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ಆಗ್ರಹಿಸಿದೆ.
ಛಲವಾದಿ ಜನಾಂಗಕ್ಕೆ ಸಚಿವ ಸ್ಥಾನ ನೀಡಿ:ಛಲವಾದಿ ಮಹಾಸಭಾ ಆಗ್ರಹ - ಛಲವಾದಿ ಮಹಾಸಭಾ
ಛಲವಾದಿ ಜನಾಂಗಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ದಾವಣಗೆರೆಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ಆಗ್ರಹಿಸಿದೆ.
ಛಲವಾದಿ ಜನಾಂಗಕ್ಕೆ ಸಚಿವ ಸ್ಥಾನಕ್ಕೆ ಒತ್ತಾಯ
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಜಿಲ್ಲಾಧ್ಯಕ್ಷ ಎಸ್. ಶೇಖರಪ್ಪ, ನಮ್ಮ ಜನಾಂಗದ ನೆಹರು ಓಲೇಕರ್, ಎಸ್. ಅಂಗಾರ, ಹರ್ಷವರ್ಧನ, ಎಂ.ಪಿ. ಕುಮಾರಸ್ವಾಮಿ ಶಾಸಕರಿದ್ದು, ನಿಮ್ಮ ಬೆಂಬಲಿಗರಾಗಿ ಪಕ್ಷಕ್ಕೆ ದುಡಿದಿದ್ದಾರೆ. ಆದರೆ ಏಳು ಬಾರಿ ಗೆದ್ದ ಅಂಗಾರ ಹಾಗೂ ಮೂರು ಬಾರಿ ಗೆದ್ದ ನೆಹರು ಓಲೇಕರ್ ಅವರಿಗೆ ಸಚಿವ ಸ್ಥಾನ ನೀಡಲು ಮೀನಾಮೇಷ ಎಣಿಸುತ್ತೀರಿ, ಈ ಹಿಂದೆ ಈ ಸಮಾಜಕ್ಕೆ ಅವಕಾಶ ನೀಡುತ್ತೇನೆ ಎಂದು ಮಾತು ಕೊಟ್ಟಿದ್ದೀರಿ, ಅದರಂತೆ ಛಲವಾದಿ ಸಮಾಜಕ್ಕೆ ಸಚಿವ ಸ್ಥಾನ ನೀಡಿ ಎಂದು ಆಗ್ರಹಿಸಿದರು.