ಕರ್ನಾಟಕ

karnataka

ETV Bharat / state

ರಾಜ್ಯದ ವಿವಿಧ ಮಠಗಳಿಗೆ ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿ, ಶ್ರೀಗಳೊಂದಿಗೆ ಗೌಪ್ಯ ಸಭೆ

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇಂದು ರಾಜ್ಯದ ಪ್ರಮುಖ ಮಠಗಳಿಗೆ ಭೇಟಿ ನೀಡಿ, ಆಯಾ ಶ್ರೀಗಳೊಂದಿಗೆ ಗುಪ್ತವಾಗಿ ಸಭೆ ನಡೆಸಿದ್ದಾರೆ.

j p nadda
ಜೆ ಪಿ ನಡ್ಡಾ

By

Published : Jan 6, 2023, 12:58 PM IST

Updated : Jan 6, 2023, 1:14 PM IST

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಂದ ಮಠಗಳಿಗೆ ಭೇಟಿ

ದಾವಣಗೆರೆ: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಎಲ್ಲಾ ರಾಜಕೀಯ ಪಕ್ಷಗಳು ಸಿದ್ಧತಾ ಕಾರ್ಯ ಕೈಗೊಂಡಿವೆ. ದಿನದಿಂದ ದಿನಕ್ಕೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಮುಂದುವರೆದಿವೆ. ಹೇಗಾದರೂ ಮಾಡಿ ಮತ್ತೊಮ್ಮೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕೆಂದು ಪಣತೊಟ್ಟಿರುವ ದೆಹಲಿ ಬಿಜೆಪಿ ನಾಯಕರು ರಣತಂತ್ರ ರೂಪಿಸುತ್ತಿದ್ದಾರೆ. ಹೀಗಾಗಿ, ವರ್ಷದ ಆರಂಭದಲ್ಲೇ ಸಾಲು ಸಾಲಾಗಿ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇಂದು ಪ್ರಮುಖ ಮಠಗಳಿಗೆ ಭೇಟಿ ನೀಡಿ, ಆಯಾ ಶ್ರೀಗಳೊಂದಿಗೆ ಗುಪ್ತ ಸಮಾಲೋಚನೆ ನಡೆಸಿದ್ದಾರೆ.

ಕನಕ ಗುರು ಪೀಠಕ್ಕೆ ಭೇಟಿ: ಮೊದಲಿಗೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಬಳಿ ಇರುವ ಕನಕ ಗುರು ಪೀಠಕ್ಕೆ ಜೆ.ಪಿ.ನಡ್ಡಾ ಭೇಟಿ ನೀಡಿ ನಿರಂಜನಾನಂದ ಪುರಿ ಶ್ರೀಯವರಿಗೆ ಶಾಲು ಹೊದಿಸಿ ಗೌರವಿಸಿದರು. ಬಳಿಕ ಸ್ವಾಮೀಜಿಯವರೊಂದಿಗೆ ಮಠದಲ್ಲೇ ರಹಸ್ಯ ಮಾತುಕತೆ ನಡೆಸಿದರು. ಈ ವೇಳೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಭೈರತಿ ಬಸವರಾಜ್​, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್, ಸಂಸದ ಜಿ.ಎಂ.ಸಿದ್ದೇಶ್ವರ್ ಇದ್ದರು.

ಇದನ್ನೂ ಓದಿ:ಬಿಜೆಪಿ ಸರ್ಕಾರ ನುಡಿದಂತೆ ನಡೆದಿದೆ: ಕೊಪ್ಪಳದಲ್ಲಿ ಜೆ ಪಿ ನಡ್ಡಾ

ಹರಿಹರದ ಪಂಚಮಸಾಲಿ ಪೀಠಕ್ಕೆ ಭೇಟಿ: ಕನಕ ಗುರುಪೀಠದ ಭೇಟಿ ಬಳಿಕ ಹರಿಹರದ ಹನಗವಾಡಿ ಗ್ರಾಮದ ಬಳಿ ಇರುವ ಪಂಚಮಸಾಲಿ ಪೀಠಕ್ಕೆ ನಡ್ಡಾ ಭೇಟಿ ನೀಡಿದರು. ಮಠಕ್ಕಾಗಮಿಸಿದ ನಡ್ಡಾರಿಗೆ ಶ್ರೀಯವರು ವಿಭೂತಿ ಇಟ್ಟಿದ್ದು ವಿಶೇಷವಾಗಿತ್ತು. ಬಳಿಕ ನಡ್ಡಾ ಅವರು ವಚನಾನಂದ ಶ್ರೀಯವರೊಂದಿಗೆ ಸಮಾಲೋಚನೆ ನಡೆಸಿದರು. ಮೊದಲ ಬಾರಿಗೆ ಮಠಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಶ್ರೀಗಳು ಶಾಲು ಹೊದಿಸಿ, ಹೂಗುಚ್ಛ ನೀಡಿ ಗೌರವಿಸಿದರು. ಬಳಿಕ ಮಠದಲ್ಲೇ ಪ್ರತ್ಯೇಕ ಕೋಣೆಯಲ್ಲಿ ರಹಸ್ಯ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ:ಏಕರೂಪ ನಾಗರಿಕ ಸಂಹಿತೆ ರಾಷ್ಟ್ರೀಯ ವಿಚಾರ, ಜಾರಿಗೆ ಬದ್ಧ: ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ

ಅನ್ಯ ಕಾರ್ಯಕ್ರಮದ ನಿಮಿತ್ತ ಮಠದಿಂದ ಹೊರಹೋದ ಪ್ರಸನ್ನಾನಂದ ಪುರಿ ಶ್ರೀ: ಪಂಚಮಸಾಲಿ ಮಠಕ್ಕೆ ಜೆ.ಪಿ.ನಡ್ಡಾ ಭೇಟಿ ನೀಡುವ ಮೊದಲು ವಾಲ್ಮೀಕಿ ಮಠಕ್ಕೆ ಭೇಟಿ ನೀಡಬೇಕಾಗಿತ್ತು. ಅದ್ದರಿಂದ ಮಠಕ್ಕೆ ನಡ್ಡಾ ಆಗಮಿಸ್ತಾರೆಂದು ಕಾದು ಕುಳಿತಿದ್ದ ಪ್ರಸನ್ನಾನಂದ ಪುರಿ ಶ್ರೀಯವರು ಜೆ.ಪಿ.ನಡ್ಡಾ ಬಾರದೇ ಪಂಚಮಸಾಲಿ ಮಠಕ್ಕೆ ತೆರಳಿದ್ದರಿಂದ ಅನ್ಯ ಕಾರ್ಯಕ್ರಮದ ನಿಮಿತ್ತ ಮಠದಿಂದ ಹೊರಗೆ ಹೋದರು. ಹೀಗಾಗಿ, ನಡ್ಡಾ ಮತ್ತು ಶ್ರೀಗಳ ಭೇಟಿ ನಡೆಯಲಿಲ್ಲ. ಶ್ರೀಗಳು ಮಠದಲ್ಲಿ ಸಿಗದ ಕಾರಣ ವಾಲ್ಮೀಕಿ ಮಠದ ಗದ್ದುಗೆಯ ದರ್ಶನ ಪಡೆದು ಜೆ.ಪಿ.ನಡ್ಡಾ ವಾಪಸ್​ ಆದರು.

ಇದನ್ನೂ ಓದಿ:ರಾಜ್ಯದಲ್ಲಿ ಮಿಷನ್ 150 ತಲುಪುವ ವಿಶ್ವಾಸವಿದೆ: ಜೆ.ಪಿ.ನಡ್ಡಾ

Last Updated : Jan 6, 2023, 1:14 PM IST

ABOUT THE AUTHOR

...view details