ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಕೃಷಿ ನಿರ್ದೇಶಕ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿ ನ್ಯಾಮತಿ ಪಟ್ಟಣದ ತೋಟಗಾರಿಕ ಸಹಾಯಕ ನಿರ್ದೇಶಕ ಅಭಿಜಿತ್ ಮತ್ತು ಸಿಬ್ಬಂದಿ ಕರಿಬಸಪ್ಪ ಇಬ್ಬರು ಬಲೆಗೆ ಬಿದ್ದಿದ್ದಾರೆ.
ನರೇಗಾದ ಯೋಜನೆ ಹಣ ಬಿಡುಗಡೆ ಮಾಡಲು 4 ಸಾವಿರ ರೂಪಅಯಿ ಲಂಚ ಪಡೆಯುವಾಗ ಎಸಿಬಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ನ್ಯಾಮತಿ ತಾಲೂಕಿನ ಒಡೆಯರ ಹತ್ತೂರು ಗ್ರಾಮದ ರೈತ ಮೊಹನ್ ದೂರಿನ ಮೇಲೆ ದಾಳಿ ನಡೆಸಲಾಗಿದ್ದು, ರೈತನ ಬಳಿ ಅಭಿಜಿತ್ 10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ. ಈ ವೇಳೆ 4 ಸಾವಿರ ಲಂಚ ಪಡೆಯುವಾಗ ಅಭಿಜಿತ್ ಮತ್ತು ಕರಿಬಸಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಇದನ್ನೂ ಓದಿ:ವಿಜಯಪುರ : ದೇವರಾಜ ಅರಸು ಅಭಿವೃದ್ಧಿ ನಿಗಮದ ಸಹಾಯಕ ಅಧಿಕಾರಿ ಎಸಿಬಿ ಬಲೆಗೆ