ಕರ್ನಾಟಕ

karnataka

By

Published : Jul 11, 2020, 11:07 PM IST

ETV Bharat / state

ದಾವಣಗೆರೆ: ಕೊರೊನಾಗೆ ನಾಲ್ಕು ಬಲಿ, 70 ಪಾಸಿಟಿವ್

ದಾವಣಗೆರೆಯಲ್ಲಿ ಇಂದು ಒಂದೇ ದಿನ 70 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ನಾಲ್ವರು ಮೃತಪಟ್ಟಿದ್ದಾರೆ.

70 Corona Positive Case in Davangere
ಬೆಣ್ಣೆನಗರಿಗೆ ಬಿಗ್ ಶಾಕ್

ದಾವಣಗೆರೆ:ಜಿಲ್ಲೆಯಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಇಂದು ಒಂದೇ ದಿನ 70 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಾಲ್ವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 18ಕ್ಕೇರಿದೆ.

ಮೃತಪಟ್ಟ ನಾಲ್ವರು ಸಹ ಅಧಿಕ ರಕ್ತದೊತ್ತಡ ಹಾಗೂ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು.‌ ರಾಣೆಬೆನ್ನೂರಿನ ಹಲಗೇರಿ ರಸ್ತೆಯ 53 ವರ್ಷದ ಪುರುಷ, ಜುಲೈ 9 ರಂದು ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಡುಪಿಗೆ ಕರೆದುಕೊಂಡು ಹೋಗಲಾಗಿದ್ದ ದಾವಣಗೆರೆಯ ದೇವರಾಜ್ ಅರಸ್ ಲೇಔಟ್​​ನ 70 ವರ್ಷದ ವೃದ್ಧ ಇಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಜಾಲಿನಗರದ 57 ವರ್ಷದ ಮಹಿಳೆ ಜುಲೈ 8ರಂದು ಎಸ್ ಎಸ್ ಹೈಟೆಕ್ ಆಸ್ಪತ್ರೆಯಲ್ಲಿ, ದಾವಣಗೆರೆಯ ಎನ್.‌ಆರ್. ರಸ್ತೆಯ 62 ವರ್ಷದ ಮಹಿಳೆ ಜುಲೈ 10 ರಂದು ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ದಾವಣಗೆರೆಯಲ್ಲಿ 35, ಚನ್ನಗಿರಿ 9, ಜಗಳೂರು 7, ಹರಿಹರ 7, ಹೊನ್ನಾಳಿ 7, ರಾಣೆಬೆನ್ನೂರಿನಿಂದ ಬಂದಿದ್ದ ಒಬ್ಬರು ಸೇರಿದಂತೆ ಬರೋಬ್ಬರಿ 70 ಮಂದಿಗೆ ವೈರಾಣು ತಗುಲಿದೆ. ಒಟ್ಟು 514 ಸೋಂಕಿತರಿದ್ದು, ಐವರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 152 ಸಕ್ರಿಯ ಪ್ರಕರಣಗಳಿವೆ. ಸುಮಾರು 32ಕ್ಕೂ ಹೆಚ್ಚು ಐಎಲ್ಐ ಹಾಗೂ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದವರಲ್ಲಿ ಕೊರೊನಾ‌ ಸೋಂಕು ವಕ್ಕರಿಸಿದ್ದರೆ, ರ್ಯಾಂಡಮ್ ಟೆಸ್ಟ್ ವೇಳೆ ಕೆಲವರಲ್ಲಿ ಸೋಂಕು ಇರುವುದು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ABOUT THE AUTHOR

...view details