ದಾವಣಗೆರೆ:ಜಿಲ್ಲೆಯಲ್ಲಿ 232 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 162 ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿಗೆ ಐವರು ಬಲಿಯಾಗಿದ್ದಾರೆ.
ದಾವಣಗೆರೆಯಲ್ಲಿ 103, ಹರಿಹರ 60, ಜಗಳೂರು 4, ಚನ್ನಗಿರಿ 30, ಹೊನ್ನಾಳಿ 26, ಹಾಗೂ ಬೇರೆ ಜಿಲ್ಲೆಯಿಂದ ಬಂದಿದ್ದ 9 ಮಂದಿಯಲ್ಲಿ ಕೊರೊನಾ ಸೋಂಕಿರುವುದು ಖಚಿತವಾಗಿದೆ.
ತಾಲೂಕವಾರು ಬಿಡುಗಡೆಯಾದವರು:
ದಾವಣಗೆರೆ 94, ಹರಿಹರ 17, ಜಗಳೂರು 03, ಚನ್ನಗಿರಿ 27, ಹೊನ್ನಾಳಿ 18, ಹಾಗೂ ಅಂತರ್ ಜಿಲ್ಲೆಯಿಂದ ಬಂದಿದ್ದ ಮೂವರು ಸೇರಿದಂತೆ ಒಟ್ಟು 162 ಜನರು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ.
ಜಿಲ್ಲೆಯಲ್ಲಿ 7,760 ಒಟ್ಟು ಸೋಂಕಿತರಿದ್ದು, ಈ ಪೈಕಿ 5,792 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. 172 ಸಾವು ಸಂಭವಿಸಿದ್ದು, ಪ್ರಸ್ತುತ 1,796 ಸಕ್ರಿಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.