ಕರ್ನಾಟಕ

karnataka

ETV Bharat / state

ಮುಲ್ಕಿ: ಆವರಣ ಕಟ್ಟೆಯಿಲ್ಲದ ಬಾವಿಗೆ ಬಿದ್ದು ಯುವಕ ಸಾವು - ಪಡುಪಣಂಬೂರಿನಲ್ಲಿ ಬಾವಿಗೆ ಬಿದ್ದು ಯುವಕ ಬಲಿ ಸುದ್ದಿ

ಯುವಕನೋರ್ವ ಪೂಜೆಯಲ್ಲಿ ಭಾಗವಹಿಸಿ ರಾತ್ರಿ ಮನೆಗೆ ಹಿಂದಿರುಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಪಡುಪಣಂಬೂರು ವ್ಯಾಪ್ತಿಯ ಬೆಳ್ಳಾಯರು ಎಂಬಲ್ಲಿ ನಡೆದಿದೆ.

young man died
ಯುವಕ ಬಲಿ

By

Published : Aug 1, 2020, 10:28 PM IST

ಮಂಗಳೂರು:ಆವರಣ ಕಟ್ಟೆಯಿಲ್ಲದ ತೆರೆದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ನಗರದ ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ ಬೆಳ್ಳಾಯರು ಕೆರೆಕಾಡು ಎಂಬಲ್ಲಿ ನಡೆದಿದೆ.

ಬಾವಿಗೆ ಬಿದ್ದಿರುವ ಯುವಕನ ಶವವನ್ನು ಮೇಲೆತ್ತುತ್ತಿರುವುದು

ವಿಶ್ವನಾಥ್ ಬಿ. ದೇವಾಡಿಗ (36) ಬಾವಿಗೆ ಬಿದ್ದು ಮೃತಪಟ್ಟವರು. ವಿಶ್ವನಾಥ್ ಬಿ. ದೇವಾಡಿಗ ಅವರು ಜು.31ರಂದು ರಾತ್ರಿ ಸ್ಥಳೀಯ ಭಜನಾ ಮಂದಿರದಲ್ಲಿ ನಡೆದ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಿದ್ದರು. ಬಳಿಕ ಅವರು ಮನೆಗೆ ಹಿಂದಿರುಗುವಾಗ ತಮ್ಮ ಮನೆಯ ಹತ್ತಿರ ಇರುವ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಯುವಕ ಬಿದ್ದಿರುವ ಬಾವಿ

ಆ.1ರಂದು ಬೆಳಗ್ಗೆ ಅವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details