ಮಂಗಳೂರು:ಗೋಲಿಬಾರ್ನಲ್ಲಿ ಸಾವನ್ನಪ್ಪಿದವರು ಅಪರಾಧಿಗಳೆಂದು ಸಾಬೀತಾದರೆ ಪರಿಹಾರ ನೀಡುವುದಿಲ್ಲ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಯು.ಟಿ.ಖಾದರ್, ಯಡಿಯೂರಪ್ಪ ದುರ್ಬಲ ಸಿಎಂ ಎಂದು ಟೀಕಿಸಿದ್ದಾರೆ.
ಯಡಿಯೂರಪ್ಪ ದುರ್ಬಲ ಸಿಎಂ: ಖಾದರ್
ಗೋಲಿಬಾರ್ನಲ್ಲಿ ಸಾವನ್ನಪ್ಪಿದವರು ಅಪರಾಧಿಗಳೆಂದು ಸಾಬೀತಾದರೆ ಪರಿಹಾರ ನೀಡುವುದಿಲ್ಲ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಯು.ಟಿ.ಖಾದರ್, ಯಡಿಯೂರಪ್ಪ ದುರ್ಬಲ ಸಿಎಂ ಎಂದು ಟೀಕಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಯು.ಟಿ.ಖಾದರ್, ಪೊಲೀಸರು ತಮ್ಮ ರಕ್ಷಣೆಗಾಗಿ ಮೃತಪಟ್ಟವರ ಹೆಸರನ್ನು ಎಫ್ಐಆರ್ನಲ್ಲಿ ಸೇರಿಸಿದ್ದಾರೆ. ಇದನ್ನು ಮೊನ್ನೆಯೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಇದೀಗ ಪಕ್ಷದ ಕಾರ್ಯಕರ್ತರ ಮಾತು ಕೇಳಿಕೊಂಡು ಪರಿಹಾರ ಕೊಡುವುದಿಲ್ಲ ಎಂಬ ಹೇಳಿಕೆ ಕೊಟ್ಟಿದ್ದಾರೆ ಎಂದರು.
ಸರ್ಕಾರಕ್ಕೆ ಮಾನವೀಯತೆ ಇರಬೇಕು. ಗಾಯಗೊಂಡವರಿಗೂ ಪರಿಹಾರ ಕೊಡಬೇಕು. ಹಿಂದೆ ಮುಲ್ಕಿ ಠಾಣೆಗೆ ಬೆಂಕಿ ಹಚ್ಚಲು ಬಂದವರಿಬ್ಬರು ಪೊಲೀಸರ ಗುಂಡೇಟಿಗೆ ಸತ್ತಾಗ ಅವರಿಗೆ ಪರಿಹಾರ ಕೊಡಲಾಗಿದೆ. ಇದನ್ನು ಸರ್ಕಾರ ಗಮನದಲ್ಲಿಟ್ಟುಕೊಂಡು ಗೋಲಿಬಾರ್ನಲ್ಲಿ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.