ಕರ್ನಾಟಕ

karnataka

ETV Bharat / state

ಓಮಸತ್ವ, ಕಸ್ತೂರಿ ಮಾರಾಟ ಮಾಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಯತ್ನ! - ಮಂಗಳೂರು ಅಪರಾಧ ಸುದ್ದಿ

ವಸ್ತುಗಳನ್ನು ಮಾರಾಟ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಅತ್ಯಾಚಾರ ಯತ್ನ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

Woman rape attempted by Salesman in Mangalore, Mangalore crime news, Mangalore women police station, ಮಂಗಳೂರಿನಲ್ಲಿ ಮಾರಾಟ ಮಾಡುವ ನೆಪದಲ್ಲಿ ಮಹಿಳೆಯ ಅತ್ಯಾಚಾರ ಯತ್ನ, ಮಂಗಳೂರು ಅಪರಾಧ ಸುದ್ದಿ, ಮಂಗಳೂರು ಮಹಿಳಾ ಪೊಲೀಸ್​ ಠಾಣೆ,
ಓಮಸತ್ವ, ಕಸ್ತೂರಿ ಮಾರಾಟ ಮಾಡುವ ನೆಪದಲ್ಲಿ ಮಹಿಳೆಯ ಅತ್ಯಾಚಾರ ಯತ್ನ

By

Published : Feb 4, 2022, 10:24 AM IST

ಮಂಗಳೂರು: ಓಮಸತ್ವ, ಕಸ್ತೂರಿ ಮಾತ್ರೆ ಮಾರಾಟ ಮಾಡುವ ನೆಪದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಮಂಗಳೂರು ಮಹಿಳಾ ಪೊಲೀಸರು ಬಂಧಿಸಿದ್ದಾರೆ.

ಓದಿ:ಈ ಕನ್ಯಗೆ ಮದುವೆಯಾಗುವುದೇ ಕಾಯಕ.. ಎಂಟು ವಿವಾಹ, ವರನಿಗೆ ಮಕ್ಮಲ್​ ಟೋಪಿ ಹಾಕುವುದೇ ಇವಳ ಕೆಲಸ!

ಮುಲ್ಕಿಯ ಕೆಂಚನಕೆರೆ ನಿವಾಸಿ ಮೊಹಮ್ಮದ್ ಇಕ್ಬಾಲ್ (52) ಬಂಧಿತ ಆರೋಪಿ. ಈತ ಫೆಬ್ರವರಿ 3 ರಂದು ಮಂಗಳೂರಿನ ಕೊಳಂಬೆ ಗ್ರಾಮದಲ್ಲಿ ಓಮಸತ್ವ, ಕಸ್ತೂರಿ ಮಾತ್ರೆ ಮಾರಾಟ ಮಾಡಲು ಬಂದಿದ್ದ. ಈ ವೇಳೆ, ಮನೆಯೊಂದರಲ್ಲಿ ಇದ್ದ ಒಂಟಿ ಮಹಿಳೆಯ ಕೈಯನ್ನು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದಾನೆ.

ಇದನ್ನು ಗಮನಿಸಿದ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಆರೋಪಿಯನ್ನು ಬಂಧಿಸಿದ ಮಹಿಳಾ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details