ಮಂಗಳೂರು :ಕಾರು ಶೋರೂಂ ಆವರಣಕ್ಕೆ ಕಾಡು ಹಂದಿಯೊಂದು ನುಗ್ಗಿದ ಘಟನೆ ಮಂಗಳೂರಿನ ಪಡೀಲ್ನಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗಳೂರಿನ ಕಾರು ಶೋರೂಂ ಆವರಣದೊಳಗೆ ನುಗ್ಗಿದ ಕಾಡು ಹಂದಿ : ವೈರಲ್ ವಿಡಿಯೋ ಮಂಗಳೂರಿನ ಪಡೀಲ್‌ನ ರೈಲ್ವೆ ಬ್ರಿಡ್ಜ್ ಬಳಿಯ ಕಾರು ಶೋರೂಂನಲ್ಲಿ ಈ ಘಟನೆ ನಡೆದಿದೆ. ಕಳೆದ ಬುಧವಾರ ನಡೆದ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಬುಧವಾರ ಮಧ್ಯಾಹ್ನದ ವೇಳೆಗೆ ಹೆದ್ದಾರಿ ಬದಿಯಿಂದ ಬಂದ ಕಾಡು ಹಂದಿ ನೇರ ಕಾರು ಶೋರೂಂ ಆವರಣದೊಳಗೆ ನುಗ್ಗಿದೆ. ಆವರಣದೊಳಗೆ ಎರಡೆರಡು ಬಾರಿ ಓಡಾಡಿದ್ದು, ಓರ್ವನಿಗೆ ತಿವಿಯಲು ಯತ್ನಿಸಿದೆ.
ಕಾಡು ಹಂದಿಯ ದಾಳಿಯಿಂದ ಅಲ್ಲಿದ್ದ ಜನರು ಕಕ್ಕಾಬಿಕ್ಕಿಯಾಗಿ ಓಡಿದ್ದಾರೆ. ಶೋರೂಂ ಆವರಣದೊಳಗೆ ಎರಡು ಬಾರಿ ಓಡಾಡಿದ ಕಾಡು ಹಂದಿ ಬಳಿಕ ಅಲ್ಲಿಂದ ತೆರಳಿದೆ.