ಕರ್ನಾಟಕ

karnataka

By

Published : May 13, 2020, 4:35 PM IST

ETV Bharat / state

ಲಾಕ್​​​ಡೌನ್​​​​​​​ ನಂತರದ ಮುಂಜಾಗ್ರತೆಗಾಗಿ ಸ್ವಯಂ ಸೇವಕರಿಂದ ಆನ್​ಲೈನ್​ ಕಾರ್ಯಾಗಾರ

ಲಾಕ್​ ಡೌನ್​ ನಂತರ ಯಾವ ರೀತಿಯಲ್ಲಿ ಮುಂಜಾಗ್ರತೆ ವಹಿಸಬೇಕು ಎಂಬ ವಿಚಾರವಾಗಿ ಮಂಗಳೂರು ವಿವಿ ಮತ್ತು ಕೆನನಾ ಕಾಲೇಜು ರಾಷ್ಟ್ರೀಯ ಸ್ವಯಂ ಸೇವಕರು ಆನ್​ಲೈನ್ ಕಾರ್ಯಾಗಾರ ನಡೆಸಿದ್ದಾರೆ.

Volunteering online workshop for post-lockdown in Mangalore
ಲಾಕ್​​​ಡೌನ್​​​​​​​ ನಂತರದ ಮುಂಜಾಗ್ರತೆಗಾಗಿ ಸ್ವಯಂ ಸೇವಕರಿಂದ ಆನ್​ಲೈನ್​ ಕಾರ್ಯಾಗಾರ

ಮಂಗಳೂರು:ಲಾಕ್ ಡೌನ್ ಬಳಿಕ ಏನೇನು ಮುಂಜಾಗ್ರತೆ ಕಾರ್ಯಗಳನ್ನು ಮಾಡಬೇಕು ಎಂಬ ವಿಚಾರವಾಗಿ ಮಂಗಳೂರು ವಿವಿ ಮಟ್ಟದ ರಾಷ್ಟ್ರೀಯ ಸೇವಾಯೋಜನಾ ಸ್ವಯಂ ಸೇವಕರು ಆನ್ ಲೈನ್​ನಲ್ಲಿ ಕಾರ್ಯಾಗಾರ ನಡೆಸಿದರು. ಮಂಗಳೂರು ವಿವಿ ಜೊತೆಗೆ ಕೆನರಾ ಕಾಲೇಜು ಕೂಡ ಭಾಗಿಯಾಗಿತ್ತು.

ಸ್ವಯಂ ಸೇವಕರಿಂದ ಆನ್​ಲೈನ್​ ಕಾರ್ಯಾಗಾರ

ರಾಜ್ಯ ರಾ.ಸೇ.ಯೋಜನಾ ಅಧಿಕಾರಿಗಳು ಮತ್ತು ಕರ್ನಾಟಕ ಸರ್ಕಾರದ ಪದನಿಮಿತ್ತ ಜಂಟಿ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪೂರ್ವಜರ ನಡೆನುಡಿಗಳಲ್ಲಿ ಇವತ್ತಿನ ಸವಾಲಿಗೆ ಉತ್ತರವಿದೆ. ಮಿತ ವೆಚ್ಚ, ಹಿತ ಆಹಾರ, ಸ್ವಚ್ಛ ಆಚಾರ, ಪ್ರಕೃತಿಯ ಜೊತೆಗಿನ ಬದುಕು ಇವುಗಳಿಗೆ ಒತ್ತು ನೀಡಬೇಕು ಎಂದು ಹೇಳಿದರು.

ಸ್ವಯಂ ಸೇವಕರು

ರಾ.ಸೇ.ಯೋಜನಾ ರಾಜ್ಯ ಅನುಷ್ಠಾನಾಧಿಕಾರಿ ಡಾ. ಪೂರ್ಣಿಮಾ ಜೋಗಿ ಮಾತನಾಡಿ, ಸರ್ಕಾರದ ನಿರ್ದೇಶನಗಳನ್ನು ಪಾಲಿಸಿ, ಅಲ್ಲದೆ ನಿಮ್ಮದೇ ನಿಟ್ಟಿನಲ್ಲಿ ಕೊರೊನಾ ಯೋಧರಾಗಿ ದೇಶ ಸೇವೆ ಮಾಡಿ ಎಂದು ಹೇಳಿದರು.

ಸ್ವಯಂ ಸೇವಕರು

ಈ ವೇಳೆ ವಿ.ವಿ. ರಾ.ಸೇ.ಯೋಜನಾ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ. ಹಾಗೂ ದ.ಕ. ಜಿಲ್ಲಾ ಕೋವಿಡ್-19 ನೋಡಲ್ ಅಧಿಕಾರಿ ದೇವಿಪ್ರಸಾದ್, ಫಾ. ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಡಾ.ಅವಿನಾಶ್ ಜೊ, ಕೆನರಾ ಕಾಲೇಜು ಪ್ರಾಂಶುಪಾಲೆ ಡಾ. ಕೆ.ವಿ.ಮಾಲಿನಿ ಸೇರಿದಂತೆ ಹಲವರು ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.

ABOUT THE AUTHOR

...view details