ಕರ್ನಾಟಕ

karnataka

ETV Bharat / state

ಮೂಡಬಿದ್ರೆ ತಾಪಂ ಗದ್ದುಗೆ ಹಿಡಿದ ಬಿಜೆಪಿ.. ಕೈಗೇ ಕೈಕೊಟ್ಟ ಸದಸ್ಯ!! - Moodabidre

ಮಂಗಳೂರು ತಾಪಂ​​ನ ಎಂಟು ಸದಸ್ಯರು ಮೂಡಬಿದ್ರೆ ತಾಲೂಕು ಪಂಚಾಯತ್​​ಗೆ ಸೇರಿದ್ದಾರೆ. ಎಂಟು ಮಂದಿಯಲ್ಲಿ ನಾಲ್ಕು ಮಂದಿ ಬಿಜೆಪಿ, ನಾಲ್ಕು ಮಂದಿ ಕಾಂಗ್ರೆಸ್​ನವರಾಗಿದ್ದಾರೆ..

Moodabidre Taluk Panchayat
ಮೂಡಬಿದ್ರೆ ತಾ.ಪಂ ಚುನಾವಣೆ

By

Published : Aug 3, 2020, 9:11 PM IST

Updated : Aug 3, 2020, 10:17 PM IST

ಮಂಗಳೂರು :ಮೂಡಬಿದ್ರೆ ತಾಲೂಕು ಪಂಚಾಯತ್‌ನ ಮೊದಲ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯ ಕೊನೆ ಕ್ಷಣದಲ್ಲಿ ಕೈಕೊಟ್ಟ ಪರಿಣಾಮ ಎರಡೂ ಸ್ಥಾನ ಬಿಜೆಪಿ ಪಾಲಾಗಿವೆ.

ತಾಪಂ ಮೊದಲ ಅಧ್ಯಕ್ಷರಾಗಿ ರೇಖಾ ಸಾಲ್ಯಾನ್​, ಉಪಾಧ್ಯಕ್ಷರಾಗಿ ಸಂತೋಷ್ ಆಯ್ಕೆಯಾಗಿದ್ದಾರೆ. ಇವರು ಬಿಜೆಪಿಯಿಂದ ಆಯ್ಕೆಯಾದ ಸದಸ್ಯರು. ಮೂಡಬಿದ್ರೆ ತಾಲೂಕು ರಚನೆಯಾದ ಬಳಿಕ ಮೊದಲ ಬಾರಿಗೆ ತಾಲೂಕು ಪಂಚಾಯತ್ ರಚಿಸಲಾಗಿದೆ.

ಮಂಗಳೂರು ತಾಪಂ​​ನ ಎಂಟು ಸದಸ್ಯರು ಮೂಡಬಿದ್ರೆ ತಾಲೂಕು ಪಂಚಾಯತ್​​ಗೆ ಸೇರಿದ್ದಾರೆ. ಎಂಟು ಮಂದಿಯಲ್ಲಿ ನಾಲ್ಕು ಮಂದಿ ಬಿಜೆಪಿ, ನಾಲ್ಕು ಮಂದಿ ಕಾಂಗ್ರೆಸ್​ನವರಾಗಿದ್ದಾರೆ. ಆದರೆ, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಸುಕುಮಾರ್ ಸನಿಲ್ ಗೈರು ಹಾಜರಾಗಿದ್ದು, ಬಿಜೆಪಿಗೆ ವರವಾಗಿ ಪರಿಣಮಿಸಿದೆ. ಅನಾಯಾಸವಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ವಲಿದು ಬಂದಿವೆ.

Last Updated : Aug 3, 2020, 10:17 PM IST

ABOUT THE AUTHOR

...view details