ಬೆಳ್ತಂಗಡಿ:ಗಾನ ಗಂಧರ್ವರೆಂದೆ ಚಿರಪರಿಚಿತರಾದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನದ ಸುದ್ದಿ ತಿಳಿದು ವಿಷಾದವಾಯಿತು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ವಿಷಾದ ವ್ಯಕ್ತಪಡಿಸಿದ ವೀರೇಂದ್ರ ಹೆಗ್ಗಡೆ
ಯುವ ಜನರ ಹಾಡುಗಳನ್ನು ಕೇಳಿ ಜನರು ಎಷ್ಟು ಸಂತೋಷಪಡುತ್ತಿದ್ದರೋ ಅಷ್ಟೇ ಎಸ್ ಪಿ ಬಾಲಸುಬ್ರಹ್ಮಣ್ಯಂರವರ ಮೆಚ್ಚುಗೆ, ಮಾರ್ಗದರ್ಶನದ ಮಾತುಗಳನ್ನು ಕೇಳಲು ಉತ್ಸುಕರಾಗುತ್ತಿದ್ದರು..
ತಮ್ಮ ವ್ಯಕ್ತಿತ್ವದಲ್ಲಿ, ನಡೆ-ನುಡಿಯಲ್ಲಿ ಬಹು ತಾಳ್ಮೆ ಕಾಯ್ದುಕೊಂಡವರು. ಸ್ನೇಹಮಯಿ ಆದ ಶ್ರೀ ಬಾಲಸುಬ್ರಹ್ಮಣ್ಯಂರವರು ನಮಗೆಲ್ಲರಿಗೂ ಬಹಳ ಮೆಚ್ಚಿನವರಾಗಿದ್ದರು. ಈಟಿವಿಯಲ್ಲಿ ಬರುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಹಾಡುವ ಸ್ಪರ್ಧಾರ್ಥಿಗಳಿಗೆ ಎಂದೂ ನೋವುಂಟುಮಾಡದೆ ಪ್ರೋತ್ಸಾಹಿಸುತ್ತಿದ್ದ ರೀತಿ ವಿಶಿಷ್ಟ.
ಯುವ ಜನರ ಹಾಡುಗಳನ್ನು ಕೇಳಿ ಜನರು ಎಷ್ಟು ಸಂತೋಷಪಡುತ್ತಿದ್ದರೋ ಅಷ್ಟೇ ಎಸ್ ಪಿ ಬಾಲಸುಬ್ರಹ್ಮಣ್ಯಂರವರ ಮೆಚ್ಚುಗೆ, ಮಾರ್ಗದರ್ಶನದ ಮಾತುಗಳನ್ನು ಕೇಳಲು ಉತ್ಸುಕರಾಗುತ್ತಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖ ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದರು.