ಕರ್ನಾಟಕ

karnataka

ETV Bharat / state

ಪೆಟ್ರೋಲ್-ಡೀಸೆಲ್ ಬೆಲೆ ಸಮ ಮಾಡಿ ಕೇಂದ್ರದಿಂದ ಹೊಸ ಇತಿಹಾಸ .. ಶಾಸಕ ಯು ಟಿ ಖಾದರ್ ವ್ಯಂಗ್ಯ

ಕೇಂದ್ರದ ಪೆಟ್ರೋಲಿಯಂ ಮಂತ್ರಿ ಈ ಬಗ್ಗೆ ಸ್ಪಷ್ಟನೆ ನೀಡಲಿ. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ಆದೇಶದಂತೆ ತೈಲಬೆಲೆ ಏರಿಕೆ ವಿರೋಧಿಸಿ ಜೂನ್‌ 29ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ..

UT Khader
ಯು.ಟಿ.ಖಾದರ್

By

Published : Jun 27, 2020, 8:57 PM IST

ಮಂಗಳೂರು:ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ಇಳಿಕೆಯಾಗಿದ್ರೂ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆ ಸಮನಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಹೊಸ ಇತಿಹಾಸ ಬರೆಯಲು ಹೊರಟಿದೆ ಎಂದು ಮಾಜಿ ಸಚಿವ ಯು ಟಿ ಖಾದರ್ ವ್ಯಂಗ್ಯವಾಡಿದರು.

ನಗರದ ಸರ್ಕ್ಯೂಟ್ ಹೌಸ್​ನಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆಯ ನಡುವೆ ಬರೀ ಆರು ರೂ. ಅಂತರವಿದ್ರೆ, ದೆಹಲಿಯಲ್ಲಿ 80.38 ರೂ. ಪೆಟ್ರೋಲ್ ಬೆಲೆಯಾದ್ರೆ 80.40 ರೂ. ಡೀಸೆಲ್‌ ಬೆಲೆ ಇದೆ‌. ಇದು ಕೇಂದ್ರ ಸರ್ಕಾರದ ಬಹುದೊಡ್ಡ ಸಾಧನೆ ಎಂದು ಕುಟುಕಿದರು.

ತೈಲ ಬೆಲೆ ಏರಿಕೆಗೆ ಕಾರಮವಾದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ ಖಾದರ್ ಕಿಡಿ..

ದಿನ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದಾಗಿ ದೇಶದ ಸರಕುಗಳ ಮೇಲೆ ಪ್ರಭಾವ ಬೀರಲಿದೆ. ದೇಶಕ್ಕಾಗಿ ಈ ಬೆಲೆ ಏರಿಕೆ ಎಂದು ಹೇಳುತ್ತಾರೆ. ದೇಶ ಅಂದರೆ ಜನ, ಜನರನ್ನು ಬಿಟ್ಟು ಈ ದೇಶ ಇದೆಯಾ?. ಆದ್ದರಿಂದ ಈ ಬೆಲೆ ಏರಿಕೆ ಯಾವ ಕಾರಣಕ್ಕೆ ಹೆಚ್ಚಾಗುತ್ತಿದೆ ಎಂದು ಜನರಿಗೆ ಗೊತ್ತಾಗಬೇಕು. ಕೇಂದ್ರದ ಪೆಟ್ರೋಲಿಯಂ ಮಂತ್ರಿ ಈ ಬಗ್ಗೆ ಸ್ಪಷ್ಟನೆ ನೀಡಲಿ. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ಆದೇಶದಂತೆ ತೈಲಬೆಲೆ ಏರಿಕೆ ವಿರೋಧಿಸಿ ಜೂನ್‌ 29ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಯು ಟಿ ಖಾದರ್ ಹೇಳಿದರು.

ಕೇಂದ್ರದ ರಕ್ಷಣಾ ಮಂತ್ರಿಯವರು ಚೀನಾ ಭಾರತದ ಗಡಿಯೊಳಗೆ ನುಸುಳಿ ಅಟ್ಟಹಾಸ ಮೆರೆದಿದ್ದಾರೆ ಎಂದು ಹೇಳುತ್ತಾರೆ. 20 ಜನ ಸೈನಿಕರನ್ನು ಹತ್ಯೆ ಮಾಡಿದ್ದು, ಸ್ಪಷ್ಟವಾಗಿದೆ. ತೆಲಂಗಾಣ ಸರ್ಕಾರ ಹತ್ಯೆಯಾದ ಸೈನಿಕರ ಕುಟುಂಬಕ್ಕೆ ಕೋಟಿ ಮೊತ್ತದಲ್ಲಿ ಪರಿಹಾರ ಧನ ನೀಡಿದೆ. ಆದರೆ, ಪ್ರಧಾನಿ ಮೋದಿಯವರು ಚೀನಾದವರು ಇಲ್ಲಿಗೆ ನುಸುಳಿಕೊಂಡು ಬಂದೇ ಇಲ್ಲ ಎನ್ನುತ್ತಾರೆ. ದೇಶದ ಪ್ರಧಾನಿ ನೀಡುವ ಸಂದೇಶವೇ ಇದು ಎಂದು ಪ್ರಶ್ನಿಸಿದರು.

ನೇಪಾಳದಂತಹ ರಾಷ್ಟ್ರ ಭಾರತದ ಗಡಿಯಲ್ಲಿ ಅತಿಕ್ರಮಣ ಮಾಡಿ ಅವರ ಭೂಪಟವನ್ನೇ ಬದಲು ಮಾಡಿದ್ದಾರೆ. ಅದು ನೇಪಾಳದ ಬಲ ಪ್ರದರ್ಶಕ್ಕಿಂತಲೂ ಭಾರತದ ಬಲಹೀನತೆಯನ್ನು ಎತ್ತಿಹಿಡಿಯುತ್ತಿದೆ. ಎಲ್ಲ ನಮ್ಮ ನೆರೆಹೊರೆಯ ರಾಷ್ಟ್ರಗಳು ನಮ್ಮೊಂದಿಗೆ ವೈಮನಸ್ಸಿನೊಂದಿಗೆ ಇದ್ದಾರೆ. ನಾವು ಅಮೆರಿಕಾವನ್ನು ನಂಬಿ ಇದ್ದೇವೆ. ಎಷ್ಟು ದಿನ ಆ ದೇಶವನ್ನು ನಂಬಿ ನಾವು ಬದುಕಬಹುದು.

ಅಲ್ಲದೆ ಅಮೆರಿಕನ್ ಅಧ್ಯಕ್ಷ ಚುನಾವಣೆಯ ಸಂದರ್ಭ ನಾವು ಯಾರ ಪರ ಇದ್ದೇವೆ ಎಂದು ಈಗಲೇ ಬಿಂಬಿತವಾಗುತ್ತಿದೆ. ಒಂದು ವೇಳೆ ಟ್ರಂಪ್ ಮುಂದಿನ ಚುನಾವಣೆಯಲ್ಲಿ ಸೋತಲ್ಲಿ ಗೆದ್ದ ಬಂದವ ನಮ್ಮನ್ನು ಏನು ಮಾಡಬಹುದು?. ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯರ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು. ಇದನ್ನೆಲ್ಲಾ ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ ಎಂದು ಯು ಟಿ ಖಾದರ್ ಹೇಳಿದರು.

ABOUT THE AUTHOR

...view details