ಕರ್ನಾಟಕ

karnataka

ETV Bharat / state

ಮಂಗಳೂರು ವಿವಿಯಲ್ಲಿ ತುಳು ಪಠ್ಯ: ಮೊದಲ ವರ್ಷದಲ್ಲೇ ಉತ್ತಮ ಪ್ರತಿಕ್ರಿಯೆ

ಇದೇ ಮೊದಲ ಬಾರಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗಳಿಗೆ ತುಳುವನ್ನು ಭಾಷೆಯಾಗಿ ಆಯ್ಕೆ ಮಾಡಿಕೊಂಡು ಕಲಿಯಲು ವಿದ್ಯಾರ್ಥಿಗಳಿಗೆ ‌ ಅವಕಾಶ ನೀಡಲಾಗಿದೆ.

By

Published : Jul 6, 2019, 7:05 PM IST

ಮಂಗಳೂರು ವಿವಿ ಪದವಿಯಲ್ಲಿ ತುಳು ಪಠ್ಯ

ಮಂಗಳೂರು: ಪದವಿ ತರಗತಿಗಳಿಗೆ ವಿದ್ಯಾರ್ಥಿಗಳು ತುಳುವನ್ನು ಭಾಷೆಯಾಗಿ ಆಯ್ಕೆ ಮಾಡಿಕೊಂಡು ಕಲಿಯಲು‌ ಮಂಗಳೂರು ವಿವಿಯಲ್ಲಿ ಅವಕಾಶ ನೀಡಲಾಗಿದ್ದು, ಮೊದಲ ವರ್ಷದಲ್ಲೇ ಉತ್ತಮ ರೆಸ್ಪಾನ್ಸ್​ ದೊರೆತಿದೆ.

ಈವರೆಗೆ ಆರನೇ ತರಗತಿಯಿಂದ ಎಸ್​ಎಸ್​​ಎಲ್​​ಸಿವರೆಗೆ ಮತ್ತು ಸ್ನಾತಕೋತ್ತರ ಪದವಿಯಲ್ಲಿ ತುಳು ಭಾಷೆಯನ್ನು ಕಲಿಯುವ ಅವಕಾಶ ಇತ್ತು. ಆದರೆ ತುಳು ಭಾಷೆಯನ್ನು ಪದವಿಯಲ್ಲಿ ಕಲಿಯುವ ಅವಕಾಶ ಇರಲಿಲ್ಲ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಯತ್ನಕ್ಕೆ ಈ ಬಾರಿ ಮಂಗಳೂರು ವಿಶ್ವವಿದ್ಯಾನಿಲಯ ಒಪ್ಪಿಗೆ ಸೂಚಿಸಿದ್ದು, ಈ ವರ್ಷದಿಂದ ಪದವಿಯಲ್ಲಿ ವಿದ್ಯಾರ್ಥಿಗಳು ತುಳುವನ್ನು ಭಾಷೆಯಾಗಿ ಕಲಿಯಲು ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಮಂಗಳೂರಿನ ರಥ ಬೀದಿಯಲ್ಲಿರುವ ಡಾ. ಪಿ.ದಯಾನಂದ ಪೈ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 40 ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡಿದ್ದಾರೆ.

ಮಂಗಳೂರು ವಿವಿ ಪದವಿಯಲ್ಲಿ ತುಳು ಪಠ್ಯ

ತುಳು ಭಾಷೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಪ್ರೊ. ಬಿ.ಶಿವರಾಮ ಶೆಟ್ಟಿ ಅವರ ಸಂಪಾದಕತ್ವದ ಸಿರಿದೊಂಪ ಎನ್ನುವ ಪಠ್ಯ ಪುಸ್ತಕ ಮುದ್ರಿಸಲಾಗಿದೆ. ಈ ಬಾರಿ ಆರಂಭವಾಗಿರುವ ಪದವಿಯಲ್ಲಿ ತುಳು ಭಾಷೆ ಕಲಿಯುವ ಅವಕಾಶಕ್ಕೆ ಉತ್ತಮ‌ ರೆಸ್ಪಾನ್ಸ್ ವ್ಯಕ್ತವಾಗಿದೆ. ತುಳುವಿನಲ್ಲಿ ಅಧ್ಯಯನ ಮಾಡುವ ತುಡಿತ, ಆಸಕ್ತಿ ಇರುವವರಿಗೆ‌ ಈ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯ ಉತ್ತಮ ಅವಕಾಶವನ್ನು ನೀಡಿದೆ.

ABOUT THE AUTHOR

...view details