ಮಂಗಳೂರು:ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಪಿಲಿಕುಲ ಮೃಗಾಲಯಕ್ಕೆ ಹೊಸ ಅತಿಥಿಗಳು ಬಂದಿದ್ದಾರೆ. ಮೃಗಾಲಯದಲ್ಲಿರುವ ಹುಲಿ, ಕಾಡುಶ್ವಾನ ಮರಿಗಳನ್ನಿಟ್ಟರೆ ರಿಯಾ, ಹೆಬ್ಬಾವು, ಕಾಳಿಂಗ ಸರ್ಪ ಮೊಟ್ಟೆಗಳನ್ನಿಟ್ಟಿವೆ.
ಪಿಲಿಕುಲದಲ್ಲಿರುವ 10 ವರ್ಷದ ಹುಲಿ ರಾಣಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಆರೋಗ್ಯವಾಗಿರುವ ಈ ಮೂರು ಮರಿಗಳು ಇನ್ನೂ 16 ದಿನಗಳಲ್ಲಿ ಕಣ್ಣು ತೆರೆಯುತ್ತವೆ. 2019 ರಲ್ಲಿ ರಾಣಿ ಹುಲಿ 5 ಮರಿಗಳಿಗೆ ಜನ್ಮ ನೀಡಿತ್ತು. ಅವುಗಳಿಗೆ ರೇವಾ, ಸುಧಾ, ಜಯರಾಮ, ಸಂಜಯ ಮತ್ತು ವಿಜಯ ಎಂದು ಹೆಸರಿಡಲಾಗಿತ್ತು. ಈ ಮರಿಗಳಿಗೆ ಪ್ರತ್ಯೇಕ ವಾಸದ ಮನೆಯನ್ನು 15 ಲಕ್ಷ ರೂ ವೆಚ್ಚದಲ್ಲಿ ಅಬುದಾಬಿಯ ರಾಮದಾಸ್ ದಂಪತಿಗಳು ನೀಡಿದ್ದರು. ಇದೀಗ ಪಿಲಿಕುಲದಲ್ಲಿ ಹುಲಿಗಳ ಸಂಖ್ಯೆ 13 ಕ್ಕೇ ಏರಿಕೆಯಾಗಿದೆ.
7 ಮರಿಗಳಿಗೆ ಜನ್ಮ ನೀಡಿದ ಕಾಡುಶ್ವಾನ:
ಪಿಲಿಕುಲದಲ್ಲಿರುವ ಕಾಡುಶ್ವಾನ ಧೋಳ್ ಕೂಡ ಇತ್ತೀಚೆಗೆ ಏಳು ಮರಿಗಳಿಗೆ ಜನ್ಮ ನೀಡಿದೆ. ಈ ಹಿಂದೆ ಇದೇ ಕಾಡುಶ್ವಾನ 5 ಮರಿಗಳಿಗೆ ಜನ್ಮ ನೀಡಿತ್ತು. ಪಿಲಿಕುಲದಲ್ಲಿ ಕಾಡುಶ್ವಾನಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.
ರಿಯಾ ಪಕ್ಷಿಯ ಜನನ: