ಮಂಗಳೂರು: ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮೂವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಒಳ ಉಡುಪು, ಟೇಪ್ನಲ್ಲಿ ಚಿನ್ನ ಸಾಗಾಟ ಯತ್ನ: ದುಬೈನಿಂದ ಕಣ್ತಪ್ಪಿಸಿ ತಂದು ಮಂಗಳೂರಲ್ಲಿ ಸಿಕ್ಕಿಬಿದ್ರು! - etv bharath
24 ಕ್ಯಾರೇಟ್ ಶುದ್ಧ ಚಿನ್ನ ಸಾಗಿಸುತ್ತಿದ್ದ ಮೂವರು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ. ಪ್ರತ್ಯೇಕ ಪ್ರಕರಣಗಳಲ್ಲಿ 21.65 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ.
ಪತ್ತೆಯಾದ ಚಿನ್ನ
ಜೂ.4 ಮತ್ತು 5 ರಂದು ಚಿನ್ನ ಸಾಗಾಟ ಪತ್ತೆಯಾಗಿದ್ದು, ಮೂರು ಪ್ರಕರಣಗಳಲ್ಲೂ 21.65 ಲಕ್ಷ ರೂ ಮೌಲ್ಯದ 655.94 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ. ಎರಡು ಪ್ರಕರಣದಲ್ಲಿ ಒಳ ಉಡುಪಿನಲ್ಲಿ ಚಿನ್ನದ ಪೇಸ್ಟ್ ಸಾಗಿಸುತ್ತಿರುವುದು ಮತ್ತು ಇನ್ನೊಂದು ಪ್ರಕರಣದಲ್ಲಿ ಅಳತೆ ಮಾಡುವ ಟೇಪ್ನ ಒಳಗೆ ಚಿನ್ನ ಅಡಗಿಸಿಟ್ಟಿದ್ದು ಪತ್ತೆಯಾಗಿದೆ.
ಅಧಿಕಾರಿಗಳ ಕಣ್ತಪ್ಪಿಸಿ ಅಕ್ರಮ ಚಿನ್ನ ಸಾಗಾಟ ಯತ್ನ ಪ್ರಕರಣಗಳು ನಡೆಯುತ್ತಿವೆ. ಆದ್ರೆ ಅಧಿಕಾರಿಗಳು ಜಾಗೃತರಾಗಿ ಖದೀಮರನ್ನು ಬಲೆಗೆ ಕೆಡೆಯುತ್ತಿದ್ದಾರೆ.