ಕರ್ನಾಟಕ

karnataka

ETV Bharat / state

ಪೊಲೀಸರ ಕೈಗೆ ಸಿಗಬಾರದು ಅಂತಾ ಉಂಗುರ ನುಂಗಿದ ಕಳ್ಳ : ಮುಂದೇನಾಯ್ತು?

ವೈದ್ಯರು ಎಕ್ಸ್ ರೇ ಪರೀಕ್ಷೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಚಿನ್ನದ ಉಂಗುರ ಇರುವುದು ಪತ್ತೆಯಾಗಿದೆ. ಹೊಟ್ಟೆಯಿಂದ ಹಲವು ಉಂಗುರಗಳನ್ನು ವೈದ್ಯರು ಹೊರ ತೆಗೆದಿದ್ದು, 35 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ..

thief-swallowed-the-ring
ಪೊಲೀಸರ ಕೈಗೆ ಸಿಗಬಾರದು ಅಂತಾ ಉಂಗುರ ನುಂಗಿದ ಕಳ್ಳ

By

Published : May 30, 2021, 7:34 PM IST

Updated : May 30, 2021, 8:35 PM IST

ಮಂಗಳೂರು :ಸುಳ್ಯ, ಪುತ್ತೂರಿನಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪೊಲೀಸರು ಬಂಧಿಸಿದ್ದ ಆರೋಪಿ ಚಿನ್ನದ ಉಂಗುರಗಳನ್ನೇ ನುಂಗಿ ಎಡವಟ್ಟು ಮಾಡಿಕೊಂಡಿದ್ದಾನೆ.

ಕೇರಳದ ತ್ರಿಶೂರ್ ಜಿಲ್ಲೆಯ ಶಿಬು ಎಂಬಾತ ತೀವ್ರ ಹೊಟ್ಟೆ ನೋವಿನಿಂದ ನೋವಿಗೆ ಒಳಗಾಗಿದ್ದು, ಕೂಡಲೇ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವೈದ್ಯರು ಎಕ್ಸ್ ರೇ ಪರೀಕ್ಷೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಚಿನ್ನದ ಉಂಗುರ ಇರುವುದು ಪತ್ತೆಯಾಗಿದೆ. ಹೊಟ್ಟೆಯಿಂದ 35 ಗ್ರಾಂ ತೂಕದ ಉಂಗುರಗಳನ್ನು ವೈದ್ಯರು ಹೊರ ತೆಗೆದಿದ್ದು,ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‌ಬಳಿಕ ಶಿಬುವನ್ನು ವಿಚಾರಣೆ ನಡೆಸಿದಾಗ ಪೊಲೀಸರ ಕೈಗೆ ಸಿಕ್ಕಿಬೀಳುವುದನ್ನು ತಪ್ಪಿಸಲೆಂದು ಚಿನ್ನದ ಉಂಗುರಗಳನ್ನು ಐಸ್ ಕ್ರೀಂ ಜೊತೆಗೆ ಸೇರಿಸಿ ನುಂಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯ ಆರೋಗ್ಯ ಸ್ಥಿತಿ ಚೆನ್ನಾಗಿದ್ದು,ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

ಸಮ್ಮತಿಯ ಸೆಕ್ಸ್​: ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಗೆ ಎಸ್ಐಟಿಯಿಂದ ಸಿಗುತ್ತಾ ಕ್ಲೀನ್ ಚಿಟ್?

Last Updated : May 30, 2021, 8:35 PM IST

ABOUT THE AUTHOR

...view details