ಕರ್ನಾಟಕ

karnataka

ETV Bharat / state

ಜೈಲು ವಾಸ್ತವ್ಯ ಮಾಡಿದವರಿಗೆ ಗ್ರಾಮ ವಾಸ್ತವ್ಯದ ಪರಿಕಲ್ಪನೆ ಇಲ್ಲ: ಐವನ್ ಡಿಸೋಜ ಟೀಕೆ

ಅಧಿಕಾರ ಕೊಟ್ಟಾಗ ನೀವು ಏನು ಮಾಡಿದಿರಿ. ರಾಜ್ಯದ ಬಡ ಜನತೆಯ ಬಗ್ಗೆ ನೀವು ಮಾತನಾಡುವುದಿಲ್ಲ. ಕೇಂದ್ರ ಸರಕಾರ ರಾಜ್ಯಕ್ಕೆ ಕೊಡಬೇಕಾದ ಅನುದಾನಗಳ ಬಗ್ಗೆ ಮಾತನಾಡಲು ನಿಮಗೆ ಶಕ್ತಿಯಿಲ್ಲ ಎಂದು ಐವನ್ ಡಿಸೋಜ ವ್ಯಂಗ್ಯವಾಡಿದರು.

ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ

By

Published : Jun 26, 2019, 2:57 PM IST

ಮಂಗಳೂರು:ಬಿಜೆಪಿಯವರು ಜೈಲು ವಾಸ್ತವ್ಯ ಮಾಡಿದವರು. ಅವರಿಗೆ ಗ್ರಾಮ ವಾಸ್ತವ್ಯದ ಪರಿಕಲ್ಪನೆ ಇಲ್ಲ ಎಂದು ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಬಿಜೆಪಿಯವರನ್ನು‌ ಟೀಕಿಸಿದ್ದಾರೆ.

ಮನಪಾದಲ್ಲಿರುವ ಕಚೇರಿಯಲ್ಲಿ ಇಂದು‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಮುಖ್ಯಮಂತ್ರಿಯವರ ಗ್ರಾಮವಾಸ್ತವ್ಯ, ಖರ್ಚು ಮಾಡುವ ಕಾರ್ಯಕ್ರಮ. ಜನರಿಗೆ ಇದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ಟೀಕಿಸಿರುವುದಕ್ಕೆ ಮರು ತಿರುಗೇಟು ನೀಡಿ, ಪೂಜಾರಿಯವರು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಪ್ರತಿನಿಧಿ. ಆಡಳಿತದ ಅನುಭವ, ಯೋಜನೆ, ಜನರ ಬಗ್ಗೆ ಕಾಳಜಿಯಿಲ್ಲ. ಗ್ರಾಮದ ಪರಿಕಲ್ಪನೆ, ದೇಶದ ಬೆಳವಣಿಗೆಯ ಕಾಳಜಿ ಇರುವವರು ಈ ರೀತಿಯ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ

ರಾಜ್ಯದಲ್ಲಿ ನಮ್ಮ ಜಿಲ್ಲೆಯೂ ಸೇರಿ ಬಹಳಷ್ಟು ಜಿಲ್ಲೆಗಳು ಬರದಲ್ಲಿವೆ ಎಂದು ಘೋಷಣೆಯಾಗಿದೆ. ಬಿಜೆಪಿಯವರು ಐದಾರು ತಂಡಗಳನ್ನು ರಚಿಸಿ ಎಲ್ಲಾ ಕಡೆಗಳಲ್ಲಿ ಸುತ್ತಾಡಿ ಬಂದಿದ್ದಾರೆ. ಆದರೆ ಅವರೇನು ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ 25 ಸಂಸದರಿದ್ದಾರೆ. ಆದರೆ ಸಂಸತ್ತಿನಲ್ಲಿ ನಮ್ಮ ರಾಜ್ಯದಲ್ಲಿ ಬರಗಾಲ ಇದೆ. ನಮಗೆ ಅನುದಾನ ನೀಡಿ ಎಂದು ಯಾವ ಸಂಸದನೂ ಕೇಳಿಲ್ಲ ಎಂದು ಹೇಳಿದರು.

ನಾವೇನಾದರೂ ಗ್ರಾಮ ವಾಸ್ತವ್ಯ ಮಾಡಿದರೆ ಇಡೀ ಗ್ರಾಮದ ಕಲ್ಪನೆ, ಚಿಂತನೆ ಬದಲು ಮಾಡುತ್ತೇವೆ. ಇದು ಎಲ್ಲರಿಗೂ ಮಾದರಿಯಾಗಿರುವಂತಹ ಕಾರ್ಯಕ್ರಮ. ಇದಕ್ಕೆ ಕುಮಾರಸ್ವಾಮಿಯವರಿಗೆ ಕಾಂಗ್ರೆಸ್ ಸಂಪೂರ್ಣವಾಗಿ ಬೆಂಬಲ ನೀಡುತ್ತದೆ ಎಂದು ತಿಳಿಸಿದರು.

ABOUT THE AUTHOR

...view details